ಸರ್ವ ಕಾಲೇಜು ವಿದ್ಯಾರ್ಥಿಶಕ್ತಿ ಕರ್ನಾಟಕ (ರಿ ) ಇದರ ಉಡುಪಿ ಜಿಲ್ಲಾ2024-25ನೇ ಸಾಲಿನ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮ ತುಳಜಾ ಭವಾನಿ ಸಭಾ ಭವನ ಕುಂಜಿಬೆಟ್ಟು ಉಡುಪಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಈಶ ವಿಠ್ಠಲ್ ದಾಸ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನದಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯ ಸಾಮಾಜಿಕ ನ್ಯಾಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ಹಲವಾರು ವರ್ಷಗಳಿಂದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ನಡೆಸುತ್ತಿದೆ. ಈ ಸಂಘಟನೆಯನ್ನು ಪ್ರತಿಯೊಂದು ಕಾರ್ಯಕ್ರಮ ಗಳಲ್ಲಿ ಕೂಡ ನಾನು ಭಾಗವಹಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಕೆಲಸ ನಡೆಯಲಿ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಾದ್ ರಾಜ್ ಕಾಂಚನ್ ಅವರು ಪಕ್ಷಾತೀತವಾಗಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ತುಂಬಿಸುವ ಕೆಲಸ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನಿಯ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಜಯ ಕೊಡವೂರು,ಪ್ರಕಾಶ್ ಶೆಟ್ಟಿ ಬಜಗೋಳಿ,ನವೀನ್ ಚಂದ್ರ ಶೆಟ್ಟಿ, ಸಂತೋಷ ಶೆಟ್ಟಿ ಪಡುಬಿದ್ರಿ, ಮನೋಜ್ ಕೋಡಿಕೆರೆ, ವಿಶ್ವಾಸ ವಿ ಅಮೀನ್, ಕರುಣಾಕರ ಶೆಟ್ಟಿ ಮುದ್ರಾಡಿ, ತುಳು ಕೂಟದ ಪುಣೆ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಸುಕುಮಾರ್ ಎಣ್ಣೆ ಹೊಳೆ, ರಮೇಶ್ ಶೆಟ್ಟಿ ದುಬೈ, ಆಶಿಕ್ ಶೆಟ್ಟಿ ಮುದ್ರಾಡಿ, ರೂಪೇಶ್ ಕಲ್ಮಾಡಿ ಚಲನಚಿತ್ರ ನಟ ಸೂರ್ಯೋದಯ ಪೆರಂಪಲ್ಲಿ, ಚಲನಚಿತ್ರ ನಟಿಯರಾದ, ಚಿರಶ್ರೀ ಅಂಚನ್, ವೆನ್ಸಿಟಾ ಡಯಾಸ್, ಸಿಂಚನ ಪ್ರಕಾಶ್, ಸ್ಪೂರ್ತಿ ಡಿ ಶೆಟ್ಟಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ರಚನ ಸಾಲಿಯನ್ ಸ್ವಾಗತಿಸಿದರು. ಸಂಘಟನೆ ಸಂಸ್ಥಾಪಕರಾದ ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮವನ್ನು ರೂಪಿಸಿದರು.
ರಾಜ್ಯಾಧ್ಯಕ್ಷರಾಗಿ ರಚನ್ ಸಾಲ್ಯಾನ್ ಹಾಗೂ ಜಿಲ್ಲಾಧ್ಯಕ್ಷರಾಗಿ ಸ್ವಯಂ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ತದನಂತರ ವಿದ್ಯಾರ್ಥಿಗಳ ವಿಜಯೋತ್ಸವದಲ್ಲಿ ಮೆರವಣಿಗೆ ಸಭಾಭವನದಿಂದ ಹೊರಟು ಎಂಜಿಎಂ ಮಾರ್ಗವಾಗಿ ಸರ್ವಿಸ್ ಬಸ್ಟಾಂಡ್ ಮೂಲಕ ಅಜ್ಜರಕಾಡು ಸೈನಿಕ ಸ್ಮಾರಕದ ವರೆಗೆ ನಡೆಯಿತು.