ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಹೊಸ 20 ಬಸ್ಸುಗಳು ಈ ತಿಂಗಳ ಕೊನೆಯ ವಾರದಲ್ಲಿ ಸೇರ್ಪಡೆಗೊಳ್ಳಲಿವೆ. ಬರೋಬ್ಬರಿ 1.78 ಕೋಟಿ ರೂ ಒಂದು ಬಸ್ಸಿನ ದರವಾಗಿದೆ.
ಕೆಎಸ್ಆರ್ಟಿಸಿ ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಸುಗಳಿದ್ದು, ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಬಸ್ಗಳು ಹೆಚ್ಚು ವಿಶೇಷತೆ ಹೊಂದಿವೆ. ಈ ಬಸ್ಸಿನಲ್ಲಿ ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿದೆ.
ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ಉಳಿದ ಬಸ್ಗಳಿಗಿಂತ ಈ ಹೊಸ ಬಸ್ಸಿನ ಉದ್ದ ಶೇ3.5 ರಷ್ಟು ಮತ್ತು ಎತ್ತರದಲ್ಲಿ ಶೇ5.6 ಹೆಚ್ಚಳ ಇರುವುದರಿಂದ ಸೀಟ್ಗಳ ನಡುವಿನ ಅಂತರ ಮತ್ತು ಹೆಚ್ಚಿನ ಹೆಡ್ ರೂಂ ಇರುತ್ತದೆ. ಜೊತೆಗೆ USB+ C ಟೈಪ್ ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಉತ್ತಮ ಎಸಿ, ಫೈರ್ ಅಲಾರ್ಮ್, ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ.
ನೂತನ ಬಸ್ಗಳನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ,KSRTC ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ ಅವರು ಹೊಸಕೋಟೆ ಬಳಿ ಇರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಿಸಿದರು.
Karnataka to get 20 new Airavat Club Class 2.0 ultra luxury buses. All you need to know
These new buses are named as Airavat Club Class 2.0 and will enhance the travel experience of Karnataka passengers with all ultra luxurious facilities.
Karnataka State Road Transport Corporation (KSRTC) is all set to add another 20 luxury Airavat Club Class buses to its fleet in the state. These new buses are named as Airavat Club Class 2.0 and will enhance the travel experience of the passengers with all ultra luxurious facilities.