ಮಂಗಳೂರು : ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ನಡೆದ ವಾಹನ ಅಪಘಾತದಲ್ಲಿ ಯುವತಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ.
ಮೃತಳನ್ನು ನಗರದ ಕೋಡಿಕಲ್‌ನ 27 ವರ್ಷದ ಕ್ರಿಸ್ತಿ ಕ್ರಾಸ್ತಾ ಎಂದು ಗುರುತಿಸಲಾಗಿದೆ. ಕ್ರಿಸ್ತಿ ಕ್ರಾಸ್ತಾ ಅವರು ಕೋಡಿಕಲ್ ವೆಲಂಕಣಿ ವಾರ್ಡಿನ ಸಿರಿಲ್ ಕ್ರಾಸ್ತಾ ಮತ್ತು ಸ್ಯಾಂಡ್ರಾ ಕ್ರಾಸ್ತಾ ದಂಪತಿಯ ಪುತ್ರಿ.
ಮೃತ ಕ್ರಿಸ್ತಿಯವರು ನಂತೂರು ವೃತ್ತದಿಂದ ಪಂಪೈಲ್ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮೀನು ಸಾಗಿಸುವ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆಯಿಂದಾಗಿ ಟಿಪ್ಪರ್ ಕ್ರಿಸ್ತಿ ಅವರ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಈ ವೇಲೆ ಹಿಂದಿನ ಚಕ್ರಕ್ಕೆ ಸಿಲುಕಿದ ಕ್ರಿಸ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಘಟನೆ ಬಳಿಕ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕ್ರಿಸ್ತಿ ಕ್ರಾಸ್ತಾಗೆ ದೇರೆಬೈಲಿನ ಯುವಕನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ನ.23ರಂದು ಮಂಗಳೂರಿನ ಚರ್ಚ್ ಹಾಲ್ ಒಂದರಲ್ಲಿ ಮದುವೆಗೆ ದಿನ ನಿಗದಿಪಡಿಸಿ ಆಮಂತ್ರಣ ಪತ್ರಿಕೆಯನ್ನೂ ಹಂಚಲಾಗಿತ್ತು. ಈ ನಡುವೆ, ಕ್ರಿಶ್ಚಿಯನ್ನರ ಚರ್ಚ್ ಪದ್ಧತಿಯಂತೆ ಮದುವೆಗೂ ಮುನ್ನ ಯುವಕ-ಯುವತಿಗೆ ಆಯಾ ಚರ್ಚ್ ಗಳಲ್ಲಿ ಮದುವೆ ಕುರಿತಾಗಿ ತರಬೇತಿ ಇರುತ್ತದೆ. ಇದಕ್ಕಾಗಿ ಕ್ರಿಸ್ತಿ ಕ್ರಾಸ್ತಾ ಅವರು ನಂತೂರಿನ ಶಾಂತಿ ಕಿರಣ ಸಭಾಂಗಣದಲ್ಲಿ ತರಬೇತಿಗೆ ಹಾಜರಾಗಿದ್ದರು.
ಚರ್ಚ್ ಪದ್ಧತಿಯಂತೆ ಮೂರು ಭಾನುವಾರಗಳ ಮದುವೆ ಘೋಷಣೆಯೂ ಇಂದಿಗೆ ಮುಗಿದಿತ್ತು. ಹೀಗಾಗಿ ಮದುವೆ ಚರ್ಚ್ ಪ್ರಕಾರ ಅಧಿಕೃತವಾಗಿತ್ತು. ಇದಲ್ಲದೆ, ಮದುವೆ ಕುರಿತ ತರಬೇತಿಯನ್ನೂ ಮುಗಿಸಿ ಸಂಜೆ ವೇಳೆಗೆ ಶಾಂತಿ ಕಿರಣ ಸಭಾಂಗಣದಿಂದ ಮನೆ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ನಂತೂರು ಕಡೆಯಿಂದ ಬಂದಿದ್ದ ಕಂಟೇನರ್ ಲಾರಿ ನೇರವಾಗಿ ಡಿಕ್ಕಿಯಾಗಿದ್ದು ಹಿಂಭಾಗದ ಚಕ್ರಕ್ಕೆ ಸಿಲುಕಿದ್ದ ಯುವತಿ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ.
ಲಾರಿ ಚಾಲಕನ ಧಾವಂತ, ನಿರ್ಲಕ್ಷ್ಯದ ಚಾಲನೆ ಬಾಳಿ ಬದುಕಬೇಕಿದ್ದ ಯುವತಿಯ ಜೀವ ಕಿತ್ತುಕೊಂಡಿದೆ. ಇತ್ತ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಮನೆಯವರಿಗೆ ಏಕೈಕ ಪುತ್ರಿಯ ಸಾವು ಶೋಕ ಸಾಗರದಲ್ಲಿ ಮುಳುಗಿಸಿದೆ. ಮದುವೆ ಸಡಗರದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
Mangalore sees yet another case of recklessness and overspeeding, this one that claimed the life of a young teacher who was to be marriage 23rd of November at the Nanthoor circle near Shanthi Kiran Bajjodi.
Christy Crasta, the daughter of Cyril and Sandra Crasta and sister of Chris Crasta breathed her last when a fish tanker came crashing onto her, catching her under the rear wheel and ending her short life of 27 on the Sunday of October 20th 2024. Ad church of St Dominic in Ashoknagar mourns her loss and invites you to be a part of the final rites on the 21st of October after which the body will be buried at the church cemetry in Urwa.