ಮಂಗಳೂರು : ಸುರತ್ಕಲ್ ಹೊಸಬೆಟ್ಟುವಿನ ಬಳಿಯ ಮನೆಯ ದೇವಸ್ಥಾನದ ದೈವಕ್ಕೆ ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನು ಕದ್ದಿದ್ದ ಕಳ್ಳ ವಾಜಿದ್ ನನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕ ರಾಜ್ಯದ 13 ಪೊಲೀಸ್ ಠಾಣೆಯಲ್ಲಿ ವಾರಂಟ್ ಆಗಿ, ತಲೆಮರೆಸಿಕೊಂಡಿದ್ದ ಗರುಡ ಗ್ಯಾಂಗ್ ನ ಖತರ್ನಾಕ್ ಕಳ್ಳನನ್ನು ಕ್ಷಿಪ್ತ ಕಾರ್ಯಾಚರಣೆಯಿಂದ ಹೆಡೆಮುರಿಕಟ್ಟುವಲ್ಲಿ ಸುರತ್ಕಲ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸುರತ್ಕಲ್ ಠಾಣಾ ಪೊಲೀಸರ ದಿಟ್ಟ ಹೆಜ್ಜೆಗೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಕರಣದ ಸಾರಾಂಶ :
ಸುರತ್ಕಲ್, ಕುಳಾಯಿ ನಿವಾಸಿ ಶ್ರೀಮತಿ ಅಮಿತಾ (43), ಅವರ ದೂರಿನ ಅನ್ವಯ, ತನ್ನ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು ಆ ಮನೆಯಲ್ಲಿ ಯಾರೂ ವಾಸವಿರದೇ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು. ಮಾತು ಮತ್ತು ದಿನಾಂಕ: 26-12-2025 ರಂದು ರಾತ್ರಿ ಸಮಯ pPಯಾರೋ ಅಪರಿಚಿತರು ಮನೆಯ ಮೇಲ್ಪಾವಣಿಯ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಸುಮಾರು ರೂ 1.00.000/- ಮೌಲ್ಯದ ಹಸಪ್ಪ ದೈವದ ತಾಮ್ರದ ಮೂರ್ತಿ-1, ಮಂತ್ರದೇವತೆಯ ಬೆಳ್ಳಿಯ ಮೂರ್ತಿ-1, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ-1. ಬೆಳ್ಳಿಯ ಕಡ್ಡಲೆ (ಖಡ್ಗ)-1, ತಾಮ್ರದ ಘಂಟೆ-2, ತಾಮ್ರದ ಚೆಂಬು-4, ಹಾಗೂ ಎಲ್.ಇ.ಡಿ ಟಿ.ವಿ ಕಳವು ಮಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದಿನಾಂಕ: 27.12.2025 ರಂದು ಪ್ರಕರಣವನ್ನು ದಾಖಲಿಸಿದ್ದರು.
ಆರೋಪಿತರ ಪತ್ತೆಯ ಬಗ್ಗೆ ಠಾಣಾ ಪಿಎನ್.ಐ ರಘು ನಾಯಕ, ಶಶಿಧರ ಶೆಟ್ಟಿಯವರ ತಂಡ ಮಾಡಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿದಂತೆ ವಾಜೀದ್ ಜೆ @ ವಾಜಿ, ಪ್ರಾಯ 27 ವರ್ಷ, ಎಂಬಾತನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆತನ ಹೇಳಿಕೆಯಂತೆ ಸದ್ರಿ ಕೃತ್ಯ ಎಸಗಿದ್ದಾಗಿ ಹಾಗೂ ಮನೆಕಳ್ಳತನ ಮಾಡಿದ ಮಾಲಿನಲ್ಲಿ ಹಿತ್ತಾಳೆ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಅಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ದಿನಾಂಕ 27.01.2026 ರಂದು ಸಯ್ಯದ್ ಅಲಿ. ಜೋಕಟ್ಟೆ ಎಂಬಾತನನ್ನು
ವಶಕ್ಕೆ ಪಡೆದು ಆರೋಪಿತರುಗಳಿಂದ ಮನೆಕಳ್ಳತನವಾದ ಸುಮಾರು 1,95.000/- ರೂ ಮೌಲ್ಯದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕೊಡೆ. ಕಟ್ಟಲೆ, ಸುಮಾರು ರೂ 2.50/- ಮೌಲ್ಯದ ಹಿತ್ತಾಳೆ ಪೂಜಾ ಸಾಮಾಗ್ರಿಗಳು. ಸುಮಾರು 300/- ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಸುಮಾರು 2,000/- ಮೌಲ್ಯದ ಟಿ.ವಿ & ಸೆಟ್ ಆಪ್ ಬಾಕ್ಸ್ ವಶಪಡಿಸಲಾಗಿದೆ. ಆರೋಪಿತರ 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 30.000/- ಮೌಲ್ಯದ ಸ್ಕೂಟರ್-1 ಅನ್ನು ಮಹಜರು ಮುಖೇನ ಸ್ವಾಧೀನ ಪಡೆಸಿಕೊಂಡಿರುವುದಾಗಿದೆ.
ಪ್ರಕರಣದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿ ವಾಜೀದ್ ಜೆ @ ವಾಜಿ ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ ಬಿ’ ರೌಡಿ ಶೀಟರ್ ಹಾಗೂ ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಾದ್ಯಂತ 1 ಕೊಲೆಯತ್ನ, 2 ದರೋಡೆ. 3 ದನ ಕಳ್ಳತನ, 6 ಮನೆಕಳ್ಳತನ, 3 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಆರೋಪಿತರನ್ನು ದಿನಾಂಕ 28.01.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, IPS ಇವರ ಮಾರ್ಗದರ್ಶನದಂತೆ, ಮಾನ್ಯ ಶ್ರೀ ಮಿಥುನ್ ಹೆಚ್ ಎನ್ IPS. ಉಪ ಪೊಲೀಸ್ ಆಯುಕ್ತರು, ಮತ್ತು ಶ್ರೀ ರವಿಶಂಕರ್, ಮಾನ್ಯ ಉಪ ಪೊಲೀಸ್ ಆಯುಕ್ತರು, ಮತ್ತು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ. ಪಿಎಸ್.ಐ ರಘುನಾಯಕ್, ಶಶಿಧರ ಶೆಟ್ಟಿ, ಎ.ಎಸ್.ಐ ಗಳಾದ ರಾಜೇಶ್ ಆಳ್ಳ ಹಾಗೂ ಠಾಣಾ ಸಿಬ್ಬಂದಿಗಳಾದ ಉಮೇಶ್ ಕೊಟ್ಟಾರಿ, ಅಣ್ಣಪ್ಪ ವಂಡ್ಸೆ, ಅಜಿತ್ ಮ್ಯಾಥ್ಯೂ, ನಾಗರಾಜ್, ಕಾರ್ತಿಕ್ ಕುಲಾಲ್, ವಿನೋದ್ ನಾಯ್ಕ, ಸುನೀಲ್ ಕುಸನಾಳ ರವರು ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಭಾಗವಹಿಸಿರುತ್ತಾರೆ.

