Mangalore and Udupi news
Blog

ಮೂಡುಶೆಡ್ಡೆ ಪಂಚಾಯತ್ ಎದುರು ತಾಯಿ ಮಗಳ ಜಗಳ ವಿರುದ್ಧ ಮಹಿಳಾ ಸಂರಕ್ಷಣಾ ವೇದಿಕೆ ಇಂದ ಕಾವೂರು ಠಾಣೆಯಲ್ಲಿ ದೂರು ದಾಖಲು

ಕಾವೂರು: ಸಾಮಾಜಿಕ ಜಾಲತಣಗಳಲ್ಲಿ ಮೂಡುಶೆಡ್ಡೆ ಪಂಚಾಯತ್ ಎದುರು ತಾಯಿ ಮಗಳ ಜಗಳ ಬಹಳ ಪ್ರಚಾರದಲ್ಲಿ ಇದ್ದು ಇದರ ಬಗ್ಗೆ ಕಾವೂರು ಠಾಣೆಯಲ್ಲಿ ವಿಚಾರಿಸಿದಾಗ ಯಾವುದೇ ದೂರು ದಾಖಲಾಗಲಿಲ್ಲ ಎಂಬ ಮಾಹಿತಿ ತಿಳಿದ ಮಹಿಳಾ ಸಂರಕ್ಷಣಾ ವೇದಿಕೆ ಇಂದು ಹಿರಿಯ ನಾಗರೀಕರಾಗಿದ್ದ ನಿರ್ಮಲ ಅವರಿಗೆ ನ್ಯಾಯ ಕೊಡಿಸುವ ಉದ್ದೇಶ ದಿಂದ ಅವರ ಮಗಳಾದ ನೇತ್ರಾವತಿ ಅವರ ಮೇಲೆ ಠಾಣೆಯಲ್ಲಿ ದೂರು ನೀಡಲಾಯಿತು.

ಆರೋಪಿ ಆಗಿರುವ ನೇತ್ರಾವತಿ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಮತ್ತು ಹಿರಿಯ ವೃದ್ದೆ ಆಗಿರುವ ನಿರ್ಮಲ ಅವರ ಯೋಗ, ಕ್ಷೇಮ ತಿಳಿಸಬೇಕೆಂದು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕಿ ಆಗಿರುವ ಶ್ರೀಮತಿ ರಮಿತಾ ಸೂರ್ಯವಂಶಿ ಮತ್ತು ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ದೀಕ್ಷಿತ್ ಅವರು ಉಪಸ್ಥಿತರಿದ್ದರು.

Related posts

Leave a Comment