Mangalore and Udupi news
Blog

ಹಿಂದು ಧರ್ಮದಲ್ಲಿ ಗೋವಿಗಿದೆ ವಿಶೇಷ ಸ್ಥಾನ

ಗುರುಪುರ: ವಾಮಂಜೂರಿನ ವಾಮಂಜೂರು ಟೈಗರ್ಸ್, ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ವತಿಯಿಂದ ಕೆತ್ತಿಕಲ್ ವೈಶಾಖ್ ಗಾರ್ಡನ್‌ನಲ್ಲಿ ಬುಧವಾರ 3ನೇ ಹೇಳಿಕೆ ವರ್ಷದ ಸಾರ್ವಜನಿಕ ಗೋಪೂಜೆ ನಡೆಯಿತು.ಕೆತ್ತಿಕಲ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಗೋಪೂಜೆಗೆ ಚಾಲನೆ ನೀಡಿದರು. ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಗೋವುಗಳಿಗೆ ಆರತಿ ಬೆಳಗಿದರು.


ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಮಾತನಾಡಿ, ಹಿಂದು ಸಮಾಜದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ದೇಶಿ ಗೋವುಗಳ ತಳಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಗೋವಿನ ಗೊಬ್ಬರ, ಮೂತ್ರದಿಂದ ತಯಾರಿಸುವ ಉತ್ಪನ್ನಗಳಿಗೆ ಒಂದಷ್ಟು ಬೆಲೆ ಹೆಚ್ಚಾಗಿದ್ದರೂ ಅವುಗಳನ್ನು ಖರೀದಿಸಿ ಪರೋಕ್ಷವಾಗಿ ಗೋ ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.


ಬಿಜೆಪಿ ಮುಖಂಡ ಜಗದೀಶ ಶೇಣವ ವಾಮಂಜೂರು, ಮನಪಾ ನಿಕಟಪೂರ್ವ ಕಾರ್ಪೊರೇಟ‌ರ್ ಹೇಮಲತಾ ಆರ್. ಸಾಲ್ಯಾನ್, ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ವಿಹಿಂಪ ಜಿಲ್ಲಾ ಗೋರಕ್ಷ ಪ್ರಮುಖ್ ಹರೀಶ್ ಎಡಪದವು, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಮಾಜಿ ತಾಪಂ ಅಧ್ಯಕ್ಷ ಗೋಕುಲದಾಸ್ ಶೆಟ್ಟಿ ಪಡುಪಳ್ಳಿ, ವಾಮಂಜೂರು ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡುಜಪುಗುತ್ತು, ಮಾಜಿ ಮೇಯರ್ ಮನೋಜ್ ಕುಮಾರ್, ಜೈಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ, ಜೈ ಶಂಕರ್ ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯಾ ಡಿ.ಬಂಗೇರ, ವಾಮಂಜೂರು ಟೈಗರ್ಸ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು. ಸ್ವಾಗತಿಸಿದ ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ವಂದಿಸಿದರು. ಉದ್ಯಮಿ ರಘು ಸಾಲ್ಯಾನ್ ಹಾಗೂ ವಾಮಂಜೂರು ಟೈಗರ್ಸ್ ಹಾಗೂ ಜೈ ಶಂಕರ್ ಮಿತ್ರ-ಮಾತೃ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಗೋ ಪೂಜೆಯಲ್ಲಿ ಸ್ಥಳೀಯ ನೂರಾರು ಮಂದಿ ಪಾಲ್ಗೊಂಡಿದ್ದರು.

Related posts

Leave a Comment