Mangalore and Udupi news
Blog

ಸಾರ್ವಜನಿಕ ದೇಣಿಗೆ ನೀಡಲು ವಿಜ್ಞಾಪನೆ, ಪ್ರತಿಷ್ಠೆ-ಕಲಶಾಭಿಷೇಕಕ್ಕೆ ಸಿದ್ಧತೆ, ಸ್ಥಳೀಯರಿಂದಲೇ ಆಕ್ಷೇಪ, ಮೆನೆಯೋ? ಮಂದಿರವೋ..? ಪುರಸಭೆಗೆ ದೂರು

ಸೋಮೇಶ್ವರದ ಪುರಸಭೆ ವ್ಯಾಪ್ತಿಯ ಪಿಲಾರು ಶಾಲೆ ಬಳಿಯ ನೂತನ ಮನೆಯೊಂದರ ಮಹಡಿ ಮೇಲೆ ಇದೇ ಸಾಯಿ ಮಂದಿರ ನಿರ್ಮಿಸಲಾಗಿದ್ದು, ಅಕ್ಟೋಬರ್ 23 ರಿಂದ 25 ರ ತನಕ ಮಂದಿರದ ಪ್ರತಿಷ್ಠೆ ಕಲಶಾಭಿಷೇಕಕ್ಕೆ ದಿನ ನಿಗದಿ ಪಡಿಸಲಾಗಿದೆ. ಆದರೆ ಜನನಿಬಿಡ ಪ್ರದೇಶದಲ್ಲಿ ಮನೆಯ ಕಟ್ಟಡದ ಮೇಲೆ ಅಕ್ರಮವಾಗಿ ಮಂದಿರ ನಿರ್ಮಾಣಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು ಸೋಮೇಶ್ವರ ಪುರಸಭೆ ಆಡಳಿತಕ್ಕೆ ದೂರು ನೀಡಿದ್ದಾರೆ.ಉಳ್ಳಾಲ, ಅ.17 : ಸೋಮೇಶ್ವರದ ಪುರಸಭೆ ವ್ಯಾಪ್ತಿಯ


ಪಿಲಾರು ಶಾಲೆ ಬಳಿಯ ನೂತನ ಮನೆಯೊಂದರ ಮಹಡಿ ಮೇಲೆ ಸಾಯಿ ಮಂದಿರ ನಿರ್ಮಿಸಲಾಗಿದ್ದು, ಇದೇ ಅಕ್ಟೋಬರ್ 23 ರಿಂದ 25 ರ ತನಕ ಮಂದಿರದ ಪ್ರತಿಷ್ಠೆ, ಕಲಶಾಭಿಷೇಕಕ್ಕೆ ದಿನ ನಿಗದಿ ಪಡಿಸಲಾಗಿದೆ. ಆದರೆ ಜನನಿಬಿಡ ಪ್ರದೇಶದಲ್ಲಿ ಮನೆಯ ಕಟ್ಟಡದ ಮೇಲೆ ಅಕ್ರಮವಾಗಿ ಮಂದಿರ ನಿರ್ಮಾಣಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು ಸೋಮೇಶ್ವರ ಪುರಸಭೆ ಆಡಳಿತಕ್ಕೆ ದೂರು ನೀಡಿದ್ದಾರೆ. ಪಿಲಾರಿನಲ್ಲಿ ಅಸಲಿಗೆ ನಿರ್ಮಾಣವಾಗುತ್ತಿರುವುದು ಮನೆಯೋ ಅಥವಾ ಮಂದಿರವೋ ಎಂದು ಪ್ರಶ್ನಿಸಿದ್ದಾರೆ.


ಪಿಲಾರು ಶಾಲೆಯ ಬಳಿಯಿಂದ ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಸಂಪರ್ಕದ ಇಳಿಜಾರು ರಸ್ತೆಯ ಮಧ್ಯ ಭಾಗದಲ್ಲಿ ದಿನೇಶ್ ಶಾಂತಿ ಎಂಬವರು ನೂತನ ಮನೆಯನ್ನ ನಿರ್ಮಿಸಿದ್ದು, ಮನೆಯ ಮೇಲ್ಬಾಗದಲ್ಲೇ ಸಾಯಿ ಬಾಬಾ ಮಂದಿರವನ್ನು ನಿರ್ಮಿಸಿದ್ದಾರೆ. ಮಂದಿರದ ಪ್ರತಿಷ್ಠೆ ಸಲುವಾಗಿ ಸಮಿತಿಯೊಂದನ್ನೂ ರಚಿಸಲಾಗಿದೆ. ಕಳೆದ ಸೆ.17 ರಂದು ಕಾಪಿಕಾಡಿನ ಸಭಾಂಗಣವೊಂದರಲ್ಲಿ ದಿನೇಶ್ ಶಾಂತಿ ಮತ್ತು ಸಮಿತಿಯ ಕೆಲವರು ಜೊತೆಗೂಡಿ ಮಂದಿರ ಪ್ರತಿಷ್ಠೆಯ ಕುರಿತಂತೆ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ್ದರು.ಅದರಲ್ಲಿ ಶಿರ್ಡಿಯಿಂದ ತಂದ ಮೂರ್ತಿಯನ್ನು ನಲ್ವತ್ತು ವರ್ಷಗಳಿಂದ ಪೂಜಿಸಿದ್ದು ಪ್ರತ್ಯೇಕ ಮಂದಿರದಲ್ಲಿ ಆರಾಧಿಸಬೇಕಾಗಿ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿರುತ್ತದೆ. ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದಕ್ಕೆ 30 ರಿಂದ 40 ಲಕ್ಷಗಳಷ್ಟು ಖರ್ಚುಗಳಿದ್ದು ಸಾರ್ವಜನಿಕರ ಸಹಕಾರದಲ್ಲಿ ಮಂದಿರ ನಿರ್ಮಿಸುವುದೆಂದು ತಿಳಿಸಲಾಗಿದೆ. ಎಲ್ಲರೂ ಸಹಕರಿಸುವಂತೆ ಕೇಳಿಕೊಂಡಿರುವ ಬಗ್ಗೆ ಮನವಿ ಪತ್ರ ಮುದ್ರಿಸಲಾಗಿದೆ. ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯಲ್ಲೂ ಚಂದಾ ನೀಡಲು ಬ್ಯಾಂಕ್ ಖಾತೆ ವಿವರಗಳನ್ನ ನೀಡಲಾಗಿದೆ. ಆದರೆ ಮಂದಿರವನ್ನು ಹೊಸತಾಗಿ ಕಟ್ಟಿಸಿರುವ ಮನೆಯ ಮಹಡಿಯಲ್ಲೇ ನಿರ್ಮಿಸಲಾಗಿದೆ. ಅಲ್ಲದೆ, ಇದರ ಬಗ್ಗೆ ಪುರಸಭೆಯಿಂದಾಗಲೀ, ಇತರ ಸಕ್ಷಮ ಪ್ರಾಧಿಕಾರದಿಂದಾಗಲೀ ಅನುಮತಿ ಪಡೆದಿಲ್ಲ ಎನ್ನುವ ಆಕ್ಷೇಪ ಕೇಳಿಬಂದಿದೆ.ಸ್ಥಳೀಯವಾಗಿ ಕೆಲವು ವರ್ಷಗಳಿಂದ ಜ್ಯೋತಿಷ್ಯ ಹೇಳಿಕೊಂಡಿದ್ದ ದಿನೇಶ್ ಮೂಲತಃ ಉಪ್ಪಿನಂಗಡಿಯವರು ಎನ್ನಲಾಗುತ್ತಿದ್ದು ಇತ್ತೀಚೆಗೆ ಪಿಲಾರಿನಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ತೊಡಗಿದ್ದರು.

ಆದರೆ ಈಗ ತನ್ನ ಮನೆಯ ಮೇಲಿನ ಮಹಡಿಯಲ್ಲಿ ಸಾಯಿಬಾಬ ಹೆಸರಲ್ಲಿ ಮಂದಿರ ನಿರ್ಮಿಸಿರುವುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದ್ದು ಸೋಮೇಶ್ವರ ಪುರಸಭೆಗೂ ದೂರು ಸಲ್ಲಿಕೆಯಾಗಿದೆ. ಪಿಲಾರು-ಚೆಂಬುಗುಡ್ಡೆ ಸಂಪರ್ಕದ ಎಂಟೂವರೆ ಅಡಿ ಅಗಲದ ಕಿರಿದಾದ ಇಳಿಜಾರು ರಸ್ತೆ ಬದಿಯಲ್ಲಿ ದಿನೇಶ್ ಶಾಂತಿ ಎಂಬವರು ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಿಸಿ ಮನೆ ಮತ್ತು ಮಂದಿರ ನಿರ್ಮಿಸುತ್ತಿದ್ದಾರೆ. ಇದು ಮನೆಯೋ ಮಂದಿರವೋ ತಿಳಿಯುತ್ತಿಲ್ಲ. ಮಂದಿರಕ್ಕೆ ಪರವಾನಿಗೆ ನೀಡಿದ್ದೀರಾ, ಮನೆಗೆ ಮಾತ್ರ ನೀಡಿದ್ದೀರಾ? ಮಂದಿರಕ್ಕೆ ಅವಕಾಶ ನೀಡಿದ್ದರೆ ಯಾವ ಮಾನದಂಡದಡಿ ಪರವಾನಿಗೆ ನೀಡಿದ್ದೀರಿ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ ಅವರಲ್ಲಿ ವಿಚಾರಿಸಿದಾಗ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಿದ್ದೇವೆ. ಮಂದಿರ ನಿರ್ಮಾಣದ ಬಗ್ಗೆ ಶನಿವಾರ ಸ್ಥಳ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.ಪ್ರತಿಷ್ಠಾ ಕಾರ್ಯದ ಸಮಿತಿಗೂ ಊರಿನ ಅನೇಕ ಗಣ್ಯರ ಹೆಸರನ್ನು ಸೇರಿಸಿ ಆಮಂತ್ರಣ ಪತ್ರ ಮುದ್ರಿಸಲಾಗಿದೆ. ಆದರೆ ಅನುಮತಿ ಇಲ್ಲದೆಯೇ ಪ್ರಮುಖರ ಹೆಸರು ಸೇರಿಸಿಕೊಂಡ ಬಗ್ಗೆಯೂ ಆರೋಪ ಕೇಳಿಬಂದಿದೆ. ಹೊರೆಕಾಣಿಕೆ ಸಮಿತಿಗೆ ಪ್ರಮುಖರೋರ್ವರ ಹೆಸರನ್ನು ಸೇರಿಸಿದ್ದು ಈ ಬಗ್ಗೆ ಅವರೇ ಪ್ರಶ್ನೆ ಮಾಡಿದ್ದರಿಂದ ಹೊರೆಕಾಣಿಕೆ ಕೈಬಿಟ್ಟಿರೋದಾಗಿ ಮಂದಿರದ ಕಡೆಯವರು ಹೇಳಿದ್ದಾರಂತೆ. ಸಭಾ ಕಾರ್ಯಕ್ರಮಕ್ಕೂ ಸ್ವಾಮೀಜಿಗಳು ಸೇರಿದಂತೆ ಸ್ಪೀಕ‌ರ್, ಸಂಸದ, ಶಾಸಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

Related posts

Leave a Comment