ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ. ಕ್ರ 155/ 2017 & ಕೋಕಾ ಪ್ರಕರಣದ ಅರೋಪಿಯಾದ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರನಾದ ಆರೋಪಿ ಶ್ರೀನಿವಾಸ್ ಎಂಬಾತನು ಕಳೆದ 8 ವರ್ಷಗಳಿಂದ ದಸ್ತಗಿರಿ ಗೆ ಸಿಗದೆ,ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಇತನ ವಿರುದ್ದ ಮಾನ್ಯ ಪ್ರಿನ್ಸಿಪಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು ರವರು ವಾರೆಂಟ್ ಹಾಗೂ ಉದ್ಘೂಷಣೆಯನ್ನು ಹೊರಡಿಸಿರುತ್ತದೆ .
ಅದ್ದುದರಿಂದ ಇತನ ಪತ್ತೆಯ ಬಗ್ಗೆ ಶ್ರೀ ಶ್ರೀಕಾಂತ್ ,ಸಹಾಯಕ ಪೊಲೀಸ್ ಅಯುಕ್ತರ , ಮಂಗಳೂರು ಉತ್ತರ ಉಪ ವಿಭಾಗ, ಪಣಂಬೂರು ರವರ ಮಾರ್ಗದರ್ಶನದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ ಬಿ ಎಸ್, ಪೊಲೀಸ್ ಉಪ ನಿರೀಕ್ಷಿಕರಾದ ಉಮೇಶ್ ಕುಮಾರ್. M. N ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ರವರ ಒಂದು ತಂಡವನ್ನು ರಚಿಸಿ ಅತನ ಪತ್ತೆಯ ಬಗ್ಗೆ ಶ್ರಮಿಸಲಾಗಿ ಅತನು ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅತನ ಪತ್ತೆಯ ಬಗ್ಗೆ ಮುಂಬಯಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಅಸಾಮಿಯನ್ನು ದಸ್ತಗಿರಿ ಮಾಡಿ ದಿನಾಂಕ: 04-10-2025 ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿದಿಸಿರುತ್ತದೆ.