Mangalore and Udupi news
Blog

ಮಂಗಳೂರು: ಗಾಂಜಾ ಸಹಿತ ಇಬ್ಬರ ಬಂಧನ

ಮಂಗಳೂರು: ನಗರದ ದಂಬೆಲ್ ನದಿ ಕಿನಾರೆ ರಸ್ತೆಯ ಫಲ್ಗುಣಿ ಸೇತುವೆ ಬಳಿ ಗಾಂಜಾ ಹಿಡಿದುಕೊಂಡು ಬರುತ್ತಿದ್ದ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.ಬಂಧಿತರು ಬಿಹಾರದ ಪೂರ್ಣಿಯಾ ಹರಿಪುರ್ ಗ್ರಾಮದ ನಿವಾಸಿ, ಪ್ರಸಕ್ತ ಕೂಳೂರು ರಾಯಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೃಷ್ಣ ಕುಮಾರ್ (20), ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಯಳವತ್ತಿ ಗ್ರಾಮ ನಿವಾಸಿ, ಪಡೀಲ್‌ ಕೊಡಕ್ಕಲ್‌ನಲ್ಲಿ ವಾಸವಾಗಿರುವ ಬಸಯ್ಯ ಶಂಕರಯ್ಯ ಮಠಪತಿ (23) ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಅಂದಾಜು 20,200 ರೂ. ಮೌಲ್ಯದ 1 ಕೆ.ಜಿ. 364 ಗ್ರಾಂ. ಗಾಂಜಾ, ಎರಡು ಮೊಬೈಲ್, 13 ಖಾಲಿ ಜಿಪ್ ಕವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment