Mangalore and Udupi news
Blog

ಸಾವಿರಾರು ಭಕ್ತ ಜನರ , ಧಾರ್ಮಿಕ ಮುಖಂಡರ ಹಾಗೂ ಚಲನ ಚಿತ್ರ ನಟರ ಸಮ್ಮುಖದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ

ಮಹಾ ಚಂಡಿಕಾ ಹೋಮ
ಸುರತ್ಕಲ್: ಕೊಡಿಕೆರೆ ಶಿವಾಜಿ ವೃತ್ತ ಬಳಿಯ ಶನೇಶ್ವರ ಕಟ್ಟೆಯಲ್ಲಿ ಗೆಳೆಯರ ಬಳಗ ಸುರತ್ಕಲ್ , ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮಹಾ ಚಂಡಿಕಾ ಹೋಮ ಸಮಿತಿಯ ಆಶ್ರಯದಲ್ಲಿ ಸನಾತನ ಧರ್ಮದ ಉಳಿವಿಗಾಗಿ ಹಾಗೂ ದೇಶ ಕಾಯುವ ವೀರ ಯೋಧರ ಹಿತರಕ್ಷಣೆಗಾಗಿ , ಸಮಸ್ತ ಭಕ್ತರ ಕಲ್ಯಾಣಕ್ಕಾಗಿ ಚಂಡಿಕಾ ದುರ್ಗಾಪರಮೇಶ್ವರಿ ಪೂರ್ಣ ಅನುಗ್ರಹ ಬೇಡಿ ಮಹಾ ಚಂಡಿಕಾ ಹೋಮ ಶುಕ್ರವಾರ ನಡೆಯಿತು.


ಭಾಗ್ಯ ಚಂದ್ರ ರಾವ್ ಧಾರ್ಮಿಕ ವಿಧಿ ವಿಧಾನ
ನೇತೃತ್ವ ವಹಿಸಿದ್ದರು. ಚಂಡಿಕಾ ಹೋಮದ ಪೂರ್ಣಾಹುತಿ ಸಮಯದಲ್ಲಿ ಚಿತ್ರಾಪುರ ಮಠ, ಶ್ರೀ ದುರ್ಗಾಪರಮೇಶ್ವರಿ ದೇವಳದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ತೀರ್ಥ ಶ್ರೀಪಾದರು, ಗುರುಪುರ ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಕೇಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ, ನಿಪ್ಪಾಣಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿಗಳ ಮತ್ತು ಗುತ್ತು ಮನೆತನದ ಗಡಿ ಪ್ರಧಾನರು ಹಾಗೂ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಿತು.


ಕಾರ್ಯಕ್ರಮದ ಅಂಗವಾಗಿ “ಪಿಲಿಗೊಬ್ಬ” ಹುಲಿ ವೇಷ ಕುಣಿತ ವಿಶೇಷ ಆಕರ್ಷಣೆಯಾಗಿತ್ತು.


ವೀರ ವಸಂತ್ ತಂಡದಿಂದ ನವಶಕ್ತಿ ವೈಭವ ನೃತ್ಯರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು,

ಸಂಜೆ ಗಾನಪ್ರೀಯ ತೋಕೂರು ಹಾಗೂ ಗೋಪಾಲಕೃಷ್ಣ ಭಜನಾ ತಂಡಗಳಿಂದ ಭಜನಾ ಸೇವೆ ನಡೆದು ರಾತ್ರಿ


ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ತಂಡದಿಂದ “ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ ಪ್ರದರ್ಶನಗೊಂಡು ಕಾರ್ಯಕ್ರಮ ಸಂಪನ್ನಗೊಂಡಿತು.

Related posts

Leave a Comment