ಬೈಂದೂರು : ಅಂತರಾಷ್ಟ್ರೀಯ ಕಡಲ ತೀರದ ಸ್ವಚ್ಛತಾ ದಿನದಂದು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಗಂಗೆಬೈಲು ಬ್ರೇಕ್ ವಾಟರ್ ಹತ್ತಿರ ಕಡಲ ತೀರವನ್ನು ಮತ್ತು ಕಡಲ ತೀರದ ರಸ್ತೆಯ ಅಂಚಿನಲ್ಲಿರುವ ಕಸವನ್ನು ತೆಗೆದು ಸ್ವಚ್ಛತೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಛತೆ ಪ್ರತಿಯೊಬ್ಬ ಮನುಷ್ಯನಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಅವಶ್ಯಕತೆ ಇದೆ ಮತ್ತು ಪರಿಸರವನ್ನು ಉಳಿಸಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿ ಸ್ವಚ್ಛತೆ ಕಾಪಾಡು ಅವಶ್ಯಕತೆ ತುಂಬಾ ಇದೆ ಎಂದು ತಿಳಿಸಿದರು
ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಖಾರ್ವಿ ಕೃಷ್ಣ ಖಾರ್ವಿ ಸರಸ್ವತಿ ನಾಯರಿ ವಸಂತಿ ಮಾಜಿ ಸದಸ್ಯರಾದ ವಂದನಾ , ಸ್ಥಳೀಯರಾದ ಅನುರಾ ಮೆಂಡನ್ ಸಾಹಸಾ ತಂಡದ ಸದಸ್ಯರು, ಎಸ್ ಎಲ್ ಆರ್ ಎಂ ಘಟಕದ ಮೇಲ್ವಿಚಾರಕರು ಮತ್ತು ಸದಸ್ಯರು, ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಸಂಘದ ಎಂ.ಬಿ.ಕೆ ಮತ್ತು ಎಲ್. ಸಿ .ಆರ್ .ಪಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ರವರು ಸ್ವಾಗತವನ್ನು ಕೋರಿ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.