ಕಾಪು: ಕಾಪು ಪೇಟೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮಾಡಿದ ಆರೋಪದಲ್ಲಿ ಖಾಸಗಿ ಬಸ್ ಚಾಲಕ ಸಹಿತ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರು ಖಾಸಗಿ ಬಸ್ ಚಾಲಕ ನಿಜಾಮುದ್ದೀನ್, ನಿರ್ವಾಹಕ ಶೇಖ್ ಅಹಮ್ಮದ್ ಮತ್ತು ಟೈಮ್ ಕೀಪರ್ ಚೇತನ್ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ಚಾಲಕ ನಿಜಾಮುದ್ದೀನ್ ಬಸ್ಸನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದಲ್ಲದೆ ಅದರ ನಿರ್ವಾಹಕ ಮತ್ತು ಟೈಮ್‌ಕೀಪರ್ ರಸ್ತೆಯಲ್ಲಿ ಪರಸ್ಪರ ನಿಂದಿಸಿ ಜಗಳವಾಡುತ್ತಿದ್ದರು. ಪೊಲೀಸರು ಸ್ಥಳಕ್ಕೆ ಬರುವ ವೇಳೆ ಅವರೆಲ್ಲ ಅಲ್ಲಿಂದ ತೆರಳಿದ್ದರು. ಅವರು ಜಗಳವಾಡುತ್ತಿದ್ದಾಗ ಸಾರ್ವಜನಿಕರು ಚಿತ್ರೀಕರಣ ಮಾಡಿದ್ದು, ಅದನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಗುರುವಾರ ಬೆಳಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.