ಉಡುಪಿ: ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಪಾರ್ಕಿನ ಬಳಿಯಿರುವ ವಸತಿ ಸಮುಚ್ಚಯದಲ್ಲಿ ಹೋಂ ನರ್ಸ್ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನ ನಮ್ರತಾ (54) ಎಂಬುವವರ ತಾಯಿ ನಾಗಮಾಲಿನಿ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಜಸಿಂತಾ ಎಂಬುವವರನ್ನು ಹೋಂ ನರ್ಸ್ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಈಕೆ ಮನೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನ-ವಜ್ರ ಹರಳನ್ನು ಹೊಂದಿದ್ದ ಬಳೆ ಹಾಗೂ 44 ಗ್ರಾಂ ತೂಕದ ವಜ್ರದ ಪದಕವನ್ನು ಹೊಂದಿದ ಚಿನ್ನದ ಸರ ಸಹಿತ 15 ಲಕ್ಷ ರೂ. ಮೌಲ್ಯದ ವಜ್ರ-ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

next post