Mangalore and Udupi news
Blog

ಕುಂದಾಪುರ : ಅಂದರ್ ಬಾಹರ್ ಇಸ್ಪೀಟು ಆಟ : ನಾಲ್ಕು ಮಂದಿ ಅಂದರ್…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು1) ಅಣ್ಣಯ್ಯ (62), 2) ಸುರೇಶ (71), 3)ದಯಾನಂದ (55), 4) ಉಬೇದುಲ್ಲಾ ಎಂದು ತಿಳಿದು ಬಂದಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ ಸೊತ್ತುಗಳನ್ನು ‌ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ 07/09/2025 ರಂದು ನಂಜಾನಾಯ್ಕ, ಪೊಲೀಸ್‌ ಉಪನಿರೀಕ್ಷಕರು (ಕಾ ಮತ್ತು ಸು), ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ರೌಂಡ್ಸ್‌ ನಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಬ್ಬಂದಿಯವರೊಂದಿಗೆ ದಾಳಿ ಮಾಡಲು ಹೋದಾಗ ಅವರುಗಳು ಓಡಿ ಹೋಗಲು ಪ್ರಯತ್ನಿಸಿದ್ದು ಅವರುಗಳಲ್ಲಿ 1) ಅಣ್ಣಯ್ಯ (62), 2) ಸುರೇಶ (71), 3)ದಯಾನಂದ (55), 4) ಉಬೇದುಲ್ಲಾ (50) ಇವರನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆಡುಕೊಂಡು, ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಇಸ್ಪೀಟ್‌ ಎಲೆಗಳು, 2) ನಗದು ರೂಪಾಯಿ 3150/-, 3) ಮೊಬೈಲ್‌ ಪೋನ್‌ ಗಳು -4 , 4) ನೆಲಕ್ಕೆ ಹಾಸಿದ ಹಳೆಯ ಖಾಲಿ ಸಿಮೆಂಟ್‌ ಚೀಲ -1, ಹಾಗೂ ಸ್ಥಳದಲ್ಲಿ ಆಪಾದಿತನಾದ ಉಬೇದುಲ್ಲಾ ಎಂಬಾತನ ಡಿಸ್ಕವರಿ ಮೋಟಾರು ಸೈಕಲ್‌ ನಂಬ್ರ KA-19-EL-9212 , ಆಪಾದಿತನಾದ ದಯಾನಂದ ಎಂಬಾತನ HONDA SHINE ಮೋಟಾರು ಸೈಕಲ್‌ ನಂಬ್ರ KA-20-HE-3846 ಸ್ವಾಧೀನಪಡಿಸಿಕೊಂಡಿರುವುದಾಗಿದೆ.

Related posts

Leave a Comment