ವೇಣೂರು: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಚರಂಡಿ ನೀರಿನಲ್ಲಿ ಪತ್ತೆಯಾಗಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕರಿಮಣೇಲು ಗ್ರಾಮದ ಕಲ್ಲಮೆಬೆಟ್ಟು ಮನೆ ನಿವಾಸಿ ಭಾಸ್ಕರ ಹೆಗ್ಡೆ (50) ಮೃತಪಟ್ಟವರು. ವಿಪರೀತ ಕುಡಿತದ ಚಟ ಹೊಂದಿದ್ದ ಅವರು ಆ. 27ರಂದು ಗಣೇಶ ಹೆಬ್ಬದ ನಿಮಿತ್ತ ಸಂಜೆ ಮನೆಯಿಂದ ಸಂಬಂಧಿ ಪ್ರಶಾಂತ್ ಶೆಟ್ಟಿಯವರೊಂದಿಗೆ ವೇಣೂರು ಕಡೆ ಹೋದವರು ಸಂಜೆಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಆ.30ರಂದು ಪರಿಚಿತರಾದ ಸದಾನಂದ ಎಂಬವರಿಗೆ ಚರಂಡಿಯಲ್ಲಿ ಬಿದ್ದ ಭಾಸ್ಕರ್ ಅವರನ್ನು ಕಂಡು ಮನೆಮಂದಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಭಾಸ್ಕರ ಅವರು ಅಮಲು ಪದಾರ್ಥ ಸೇವಿಸಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.