“ಆಟಿ ಗಮ್ಮತ್” ಕಾರ್ಯಕ್ರಮದಲ್ಲಿ ಶಿಕ್ಷಕಿ ವಿಜಯಲಕ್ಷ್ಮಿ
ಪಡುಬಿದ್ರಿ: ಎಳೆ ವಯಸ್ಸಿನಲ್ಲೇ ಮಕ್ಕಳು ಹೃದಯಘಾತಕ್ಕೆ ಬಲಿಯಾಗುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ ಇದಕ್ಕೆ ಮೂಲ ಕಾರಣ ನಮ್ಮ ಆಹಾರ ಪದ್ದತಿ ಎಂಬುದು ಅಷ್ಟೇ ಸತ್ಯ, ಪಿಜ್ಹಾ ಬರ್ಗರ್ ನಿಂದ ಮಕ್ಕಳನ್ನು ದೂರವಿಡೊಣ, ಮಕ್ಕಳ ಆರೋಗ್ಯ ಆಯುಷ್ಯವನ್ನು ವೃದ್ಧಿಸುವುದರೊಂದಿಗೆ, ಒಂದು ಹಿರಿ ಮಾತಿನಂತೆ “ಸಹವಾಸದಂತೆ ಬುದ್ದಿ.. ಆಹಾರದಂತೆ ಲದ್ದಿ” ಮಕ್ಕಳು ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಅವರನ್ನು ಎರಡು ಕಣ್ಣಿನಿಂದ ಮಾತ್ರವಲ್ಲ ಮೂರನೇ ಕಣ್ಣಿನಲ್ಲಿ ವೀಕ್ಷಿಸುವ ಮಹತ್ತರ ಕಾರ್ಯ ಹೆತ್ತವರದ್ದಾಗಿದೆ ಎಂಬುದಾಗಿ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಹೇಳಿದ್ದಾರೆ.
ಅವರು ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿಯಾಗಿ ಆಯೋಜಿಸಿದ “ಆಟಿದ ಗಮ್ಮತ್” ಎಂಬ ನಾಮಪದಡಿಯಲ್ಲಿ ತುಳುವ ಸಂಸ್ಕೃತಿಯ ಗತ ವೈಭವ ಸಾರುವ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಆಟಿ ಸಂಭ್ರಮಿಸುವ ಕಾಲವಲ್ಲ ಕಷ್ಟದ ದಿನಗಳವು, ಹೊಟ್ಟೆಗೆ ಹಿಟ್ಟಿಲ್ಲ ಎಂಬ ಸ್ಥಿತಿ, ಆಟಿಯಲ್ಲಿ ನಮ್ಮನ್ನು ಕಾಯುವ ದೈವಗಳು ಘಟ್ಟ ಸೇರುತ್ತವೆ ಎಂಬುದು ಶುದ್ಧ ಸುಳ್ಳು, ಕಾರಣ ನಮಗೆ ತಿನ್ನಲು ಆಹಾರ ವಿಲ್ಲದಿರುವಾಗ, ದೈವಕ್ಕೆ ಬೇಕಾದ ಆರಾಧನೆ ಮಾಡಲು ಸಾಧ್ಯ ಇಲ್ಲ ಎಂಬಾಗ ಅನಿವಾರ್ಯ ಸ್ಥಿತಿಯಲ್ಲಿ ಈ ಕತೆಯನ್ನು ಕಟ್ಟಲಾಗಿದೆ ಎಂಬುದು ನಿತ್ಯ ಸತ್ಯವೆಂದರು.
ಸಭಾ ಕಾರ್ಯಕ್ರಮದ ಮೊದಲು ಇನ್ನರ್ ವೀಲ್ ಸಂಸ್ಥೆಯ ಐ ಎಸ್ ಒ, ನಮೃತಾ ಮಹೇಶ್ ಇವರ ಮುಂದಾಳತ್ವದಲ್ಲಿ ಸಂಸ್ಥೆಯ ಮಹಿಳೆಯರಿಗೆ ತುಳುವ ಸಿಂಗಾರಿ ಹಾಗೂ ಪುರುಷರಿಗೆ ಪೆರ್ಮೆದ ತುಳುವೆ ಎಂಬ ವಾಕ್ಯ ದಡಿ, ತುಳು ಸಂಸ್ಕೃತಿಗಳತ್ತ ದೃಷ್ಟಿ ಬೀರುವ ಸ್ಪರ್ಧೆಯನ್ನು ನಡೆಸಿದ್ದು, ಇನ್ನರ್ ವೀಲ್ ಪರವಾಗಿ ಸುನೀತಾ ಭಕ್ತವತ್ಸಲಾ ವಿಜೇತರಾದರೆ, ರೋಟರಿ ಪರವಾಗಿ ಬಿ.ಎಸ್. ಆಚಾರ್ಯ ಪ್ರಶಸ್ತಿ ತನ್ನದಾಗಿಸಿದರು.
ಸಭಾ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು, ಕೃಷಿಕ ಶ್ರೀಕಾಂತ್ ಆಚಾರ್ಯ, ನಾಟಿ ವೈಧ್ಯೆ ಸುನಂದ ಡಿ. ಸಾಲ್ಯಾನ್, ಗ್ರಾಮ ದೇಗುಲದಲ್ಲಿ ಚಾಕರಿ ನಡೆಸುತ್ತಿರುವ ಸುಶೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು,
ಆ ಬಳಿಕ ಮಾತೃ ಸಂಸ್ಥೆಯ ಸದಸ್ಯೆಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸುನೀಲ್ ಕುಮಾರ್ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಇನ್ನರ್ ವೀಲ್ ಅಧ್ಯಕ್ಷೆ ಸ್ನೇಹ ಪ್ರವೀಣ್, ವೈ. ಸುಧೀರ್ ಕುಮಾರ್, ವೈ. ದೀಪಕ್ ಕುಮಾರ್, ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್, ಇನರ್ ವೀಲ್ ಕಾರ್ಯದರ್ಶಿ ಸುನಂದ ಸಾಲ್ಯಾನ್, ಕಾರ್ಯಕ್ರಮದ ನಿರ್ದೇಶಕರಾದ ಸುಚರಿತ ಅಂಚನ್, ಬಿ.ಎಸ್. ಆಚಾರ್ಯ ಹಾಗೂ ಕಾರ್ತಿಕ್ ಕರ್ಕೇರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂತೋಷ್ ನಂಬಿಯಾರ್ ನಿರ್ವಾಹಿಸಿದರು.
ಅಂತಿಮವಾಗಿ ಸಂಸ್ಥೆಯ ಸದಸ್ಯರೇ ತಯಾರಿಸಿ ತಂದಿದ್ದ ಹತ್ತಾರು ಬಗೆಯ ಆಟಿ ಖಾದ್ಯಗಳನ್ನು ನೂರಾರು ಮಂದಿ ಸವಿದರು.