Mangalore and Udupi news
Blog

ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣ ಮಾತ್ರ ಎಸ್ ಐಟಿ ತನಿಖೆ…!!

ಸೌಜನ್ಯ ಪ್ರಕರಣ ತನಿಖೆ ಇಲ್ಲ : ಗೃಹ ಸಚಿವ ಪರಮೇಶ್ವರ್‌…

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಎಸ್ ಐಟಿ ತನಿಖೆಗೆ ರಾಜ್ಯ ಸರಕಾರ ನೀಡಿದೆ. ಇದು ಸೌಜನ್ಯ ಪ್ರಕರಣದ ತನಿಖೆ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ಅವರು ತನಿಖೆ ಮಾಡುತ್ತಾರೆ. ಒತ್ತಡದ ಪ್ರಶ್ನೆ ಇಲ್ಲ. ಒತ್ತಡಕ್ಕೆ ಮಣಿದು ಮಾಡುವ ಕೆಲಸ ಅಲ್ಲ. ಅಲ್ಲಿನ ಸಾಧಕ ಬಾಧಕ ವಸ್ತು ಸ್ಥಿತಿ ನೋಡಿ ತೀರ್ಮಾನ ಮಾಡಬೇಕಾಗುತ್ತದೆ. ನಾವು ಪ್ರಾಥಮಿಕವಾಗಿ ತನಿಖೆ ಮಾಡಿ ಸ್ಟೇಷನ್ ಮಟ್ಟದಲ್ಲಿ ಅಂತ ಅವರಿಗೆ ಹೇಳಿದ್ದೆವು‌. ಜೊತೆಗೆ ಇನ್ನೂ ಹೆಚ್ಚಿನ ರೀತಿಯ ತನಿಖೆ ಆಗಬೇಕು ಎಂಬುದು ಹೆಚ್ಚಿನ ರೀತಿಯ ಅಭಿಪ್ರಾಯಗಳು ಸರ್ಕಾರ ಇದರಲ್ಲಿ ಮುಚ್ಚಿ ಇಡುವಂತದ್ದು ಏನೂ ಇಲ್ಲ ಎಂದಿದ್ದಾರೆ.

ಸ್ವಲ್ಪ ಯೋಚನೆ ಮಾಡಿ ನಾವು ತೀರ್ಮಾನ ಕೈಗೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತದೆ ಅದನ್ನು ಕಾದು ನೋಡೋಣ. ಇದು ಸಣ್ಣ ವಿಚಾರ ಅಂತ ನಾವು ಪರಿಗಣಿಸಿಲ್ಲ ಸ್ಟೇಷನ್ ಮಟ್ಟದಲ್ಲಿ ಅವರು ಕಂಪ್ಲೆಂಟ್ ಕೊಟ್ಟಾಗ ಎಫ್‌ಐಆರ್ ಹಾಕಿ ಅವರು ತನಿಖೆ ಮಾಡ್ತಾರೆ. ಅದು ಹೆಚ್ಚು ಹೆಚ್ಚು ಬೆಳೆದಾಗ ತನಿಖೆ ತೀವ್ರತೆಯನ್ನು ಪಡೆಯುತ್ತೆ. ಹಾಗಾಗಿ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಎಸ್‌ಐಟಿ ರಚನೆ ಮಾಡಿದ್ದೇವೆ ಎಂದಿದ್ದಾರೆ.

Related posts

Leave a Comment