ಸುರತ್ಕಲ್: ಟ್ಯಾಂಕರ್ ಚಾಲನೆ ಮಾಡುವ ವೇಳೆ ಚಾಲಕನಿಗೆ ಅನಾರೋಗ್ಯ ಉಂಟಾಗಿದ್ದರೂ ಸಮಯ ಪ್ರಜ್ಞೆ ಮೆರೆದು ದೊಡ್ಡ ಅಪಘಾತವೊಂದು ತಪ್ಪಿಸಿದ ಘಟನೆ ಕುಳಾಯಿ ರೈಲ್ವೆ ಬ್ರಿಡ್ಜ್ ಬಳಿ ಭಾನುವಾರ (ಜು.13) ಮಧ್ಯಾಹ್ನ ನಡೆದಿದೆ.
ಎಲ್‌ಪಿಜಿ ಅನಿಲ ತುಂಬಿಕೊಳ್ಳಲು ಬರುತ್ತಿದ್ದ ಟ್ಯಾಂಕರ್‌ನ ಚಾಲಕರೊಬ್ಬರು ದಿಢೀರ್ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಎಚ್‌ಪಿಸಿಎಲ್‌ನಿಂದ ಅನಿಲ ತುಂಬಿಸಿಕೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಉಂಟಾಗಿ, ಅವರು ಅಸ್ವಸ್ಥಗೊಂಡು ರಕ್ತ ವಾಂತಿ ಮಾಡಿದ್ದಾರೆ. ತಕ್ಷಣ ಚಾಲಕ ಹ್ಯಾಂಡ್ ಬ್ರೇಕ್ ಬಳಸಿ ವಾಹನವನ್ನು ನಿಲ್ಲಿಸಿದ್ದಾರೆ. ಇದರಿಂದ ಭಾರೀ ಅಪಘಾತ ತಪ್ಪಿದಂತಾಗಿದೆ.
ಸ್ಥಳೀಯರು ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿದ್ದ ಚಾಲಕನನ್ನು ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನಾರೋಗ್ಯ ಉಂಟಾಗಿದ್ದರೂ ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅಪಘಾತವೊಂದು ತಪ್ಪಿದೆ.