Mangalore and Udupi news
ಉಡುಪಿ

ಹೆಜಮಾಡಿ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಕ್ಷೇತ್ರಕ್ಕೆ ಶಿಲಾನ್ಯಾಸ

ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯ ಬಹು ಕಾರ್ಣಿಕ ಕ್ಷೇತ್ರದಲ್ಲಿ ಒಂದಾದ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಯ ಸಮಗ್ರ ಜೀರ್ಣೋದ್ಧಾರಕ್ಕಾಗಿ ಶಿಲಾನ್ಯಾಸ ಕಾರ್ಯ ವೇದಮೂರ್ತಿ ಕೊಲಕಾಡಿ ವಾದಿರಾಜ ತಂತ್ರಿಯವರ ನೇತ್ರತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ವಾಸ್ತು ತಜ್ಞ ಬೆಳ್ಮಣ್ ಸರ್ವೇಶ ತಂತ್ರಿವರ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.


ಹೆಜಮಾಡಿ ಪಟೇಲರ ಮನೆ ಪುಷ್ಪಾರಾಜ್ ಶೆಟ್ಟಿ ಜೋರ್ಣೋದ್ದಾರ ಸಮಿತಿ ಅಧ್ಯಕ್ಷತೆಯಲ್ಲಿ, ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಕ್ಷೇತ್ರ ಸಮಗ್ರವಾಗಿ ಜೀರ್ಣೋದ್ಧಾರಕ್ಕೆ ಚಾಲನೆ ದೊರಕಿದ್ದು, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಕ್ಷೇತ್ರಕ್ಕೆ ಜಿಲ್ಲೆ, ಹೊರ ಜಿಲ್ಲೆ ರಾಜ್ಯ ಹೊರರಾಜ್ಯ, ದೇಶ ವಿದೇಶಗಳಲ್ಲೂ ಭಕ್ತ ಸಮೂಹವನ್ನು ಹೊಂದಿದ್ದು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಅಡಚನೆಯಾಗದು, ಸಮಿತಿ ಹಾಗೂ ಗ್ರಾಮದ ನಿರೀಕ್ಷೆಯಂತೆ ಒಂದೇ ವರ್ಷದಲ್ಲಿ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಕಲಶಾಧಿ ಧಾರ್ಮಿಕ ಕಾರ್ಯಗಳು ನಡೆಯಲಿದೆ ಎಂಬುದಾಗಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೆಜಮಾಡಿ ಪಟೇಲರ ಮನೆ ಶಂಕರ ಶೆಟ್ಟಿಯವರ ಪುತ್ರ ಪುಷ್ಪಾರಾಜ್ ಶೆಟ್ಟಿಯವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರದ ಮೊಕ್ತೇಸರರಲ್ಲಿ ಒರ್ವರಾದ ಶರಣ್ ಕುಮಾರ್ ಮಟ್ಟು, ಹೆಜಮಾಡಿ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗೆ ಈ ದಿನ ಶಿಲಾನ್ಯಾಸ ನಡೆಸುವ ಮೂಲಕ ಚಾಲನೆ ದೊರಕಿದ್ದು, ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಜೀರ್ಣೋದ್ಧಾರಕ್ಕಾಗಿ ಇಷ್ಟರಲ್ಲೇ ಅನೇಕ ದಾನಿಗಳನ್ನು ಅಧ್ಯಕ್ಷರ ಮೂಲಕ ಭೇಟಿ ಮಾಡಿದ್ದು ಉತ್ತಮ ಸ್ಪಂಧನೆ ದೊರಕಿದೆ ಎಂದರು.
ಈ ಸಂದರ್ಭ ಪ್ರಮುಖರಾದ ಸುರೇಶ್ ಕೆ. ಶೆಟ್ಟಿ, ರೇಶ್ಮಾ ಮೆಂಡನ್, ರತ್ನಾಕರ್ ಶೆಟ್ಟಿ ಮಟ್ಟಿಮನೆ, ಲೋಕೇಶ್ ಅಮೀನ್, ಅರುಣ್ ಶೆಟ್ಟಿ ಪಡುಮನೆ, ಶಿವರಾಮ ಶೆಟ್ಟಿ, ಸುಧಾಕರ್ ಕರ್ಕೇರ, ದೊಂಬ ಪೂಜಾರಿ, ದಯಾನಂದ ಹೆಜಮಾಡಿ, ವಸಂತ ಹೆಜಮಾಡಿ, ಪ್ರೇಮ್ ನಾಥ್ ಶೆಟ್ಟಿ, ಪ್ರಾಣೇಶ್ ಹೆಜಮಾಡಿ, ಪ್ರಭೋದ್ ಚಂದ್ತ ಹೆಜಮಾಡಿ, ನವೀನ್, ಪವಿತ್ರಾ ಗಿರೀಶ್, ಹೇಮಾನಂದ ಕೆ. ಪುತ್ರನ್, ವಸಂತ ದೇವಾಡಿಗ, ಪದ್ಮನಾಭ ಸುವರ್ಣ, ಶ್ರೀ ಕಾಂತ್ ಭಟ್, ಲಲಿತಾ ಎಸ್. ಸಾಲ್ಯಾನ್, ಮಾಧವ ಹೆಜಮಾಡಿ, ಸತೀಶ್ ಕೋಟ್ಯಾನ್,ದಿವಾಕರ್ ಹೆಜಮಾಡಿ, ದಾಮೋದರ್ ಬಂಗೇರ, ಗಣೇಶ್ ಕೋಟ್ಯಾನ್, ದೀಪಕ್ ನಡಿಕುದ್ರು, ಮುಂತಾದವರಿದ್ದರು.

Related posts

Leave a Comment