ಹಲವಾರು ವರ್ಷಗಳಿಂದ ಬಡವರ ಆಶಾಕಿರಣವಾಗಿ ತನ್ನ ಸಮಾಜ ಸೇವೆಯಲ್ಲಿ ಮಾದರಿ ಆಗಿರುವ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಜೂನ್ ತಿಂಗಳ ಸೇವಾ ಯೋಜನೆಯಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ 70000 ರೂಪಾಯಿಗಳ ಆರ್ಥಿಕ ನೆರವು ನೀಡಿದೆ.
ಮಂಗಳೂರು ಶ್ರೀನಿವಾಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕುಮಾರಿ ಪೂಜಾರವರ ಶಿಕ್ಷಣ ಶುಲ್ಕದ ಮೊತ್ತ 45,000 ರೂಪಾಯಿ, ಸುರತ್ಕಲ್ ಗೋವಿoದಾಸ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಅನನ್ಯ ರವರ ಶಿಕ್ಷಣ ಶುಲ್ಕದ ಮೊತ್ತ 10,000 ರೂಪಾಯಿ, ಮಂಗಳೂರು ವಿದ್ಯಾದೀವಿಗೆ ಚಾರಿಟೇಬಲ್ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ನವಮಿ ರವರ ಶಿಕ್ಷಣ ಶುಲ್ಕದ ವೆಚ್ಚ 5,000 ರೂಪಾಯಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ತ್ರಿಶಾ ಆಚಾರ್ಯ ರವರ ಶಿಕ್ಷಣ ಶುಲ್ಕದ ವೆಚ್ಚ 10,000 ರೂಪಾಯಿ ಸಹಾಯಧನವನ್ನು ಸಂಸ್ಥೆಯ ಪರವಾಗಿ ನೀಡಿದ್ದಾರೆ.
ಒಟ್ಟು 70,000 ರೂಪಾಯಿಯ ಆರ್ಥಿಕ ನೆರವನ್ನು ಪಲಾನುಭವಿಗಳಿಗೆ ಹಸ್ತಾಂತರಿಸಿ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿ ಮುಂದಿನ ಸಮಾಜಕ್ಕೆ ಆಸರೆಯಾಗಿ ಆದರ್ಶರಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯ ಅಧ್ಯಕ್ಷರಾದ ರಂಜಿತ್ ಶೆಟ್ಟಿ ಕುಳಾಯಿ, ಕಾರ್ಯದರ್ಶಿಗಳಾದ ಗಂಗಾಧರ್ ಶೆಟ್ಟಿ ತೋಕೂರು, ಪತ್ರಕರ್ತರಾದ ಮೋಹನ್ ದಾಸ್ ಮರಕಡ, ಮತ್ತು ಸಂಸ್ಥೆಯ ಸದಸ್ಯರುಗಳಾದ ಭಾಸ್ಕರ್ ಶೆಟ್ಟಿ ತೋಕೂರು, ಮೋಹನ್ ಕುಲಾಲ್ ತೋಕೂರು, ನಾಗೇಶ್ ಶೆಟ್ಟಿ ತೋಕೂರು, ರಮನಾಥ್ ಕುಲಾಲ್ ಕೋಡಿಕೆರೆ, ನಿತಿನ್ ಬಂಗೇರ ಕೋಡಿಕೆರೆ, ಜಯೇಂದ್ರ ಕುಲಾಲ್ ಸುರತ್ಕಲ್ ಉಪಸ್ಥಿತರಿದ್ದರು.
Edu.ಕಾರುಣ್ಯ ಎಂಬ ಟ್ರಸ್ಟ್ ನ ಸ್ಥಾಪಕರಾದ ಮೋಹನ್ ದಾಸ್ ಮರಕಡ ಅವರ ಮನವಿಯಂತೆ Edu.ಕಾರುಣ್ಯ ಟ್ರಸ್ಟ್ ನ ಸಹಾಯಹಸ್ತದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ತ್ರಿಷಾ ಆಚಾರ್ಯ ಅವರಿಗೆ ಸಹಾಯ ಧನ ನೀಡಲಾಯಿತು.
ಮೋಹನ್ ದಾಸ್ ಮರಕಡ ಇವರು ಸ್ಥಾಪಿಸಿರುವ Edu.ಕಾರುಣ್ಯ ಎಂಬ ಸಂಸ್ಥೆಯಲ್ಲಿ 23 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಸಂಸ್ಥೆ ಶ್ಲಾಘನೀಯವಾಗಿದೆ.