Mangalore and Udupi news
ಅಪರಾಧಉಡುಪಿ

ನಿಟ್ಟೆ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ಕ್ಯಾಂಪಸ್ ನಲ್ಲಿ ಕಂಡು ಬಂದ ದೇಶ ದ್ರೋಹ ಬರಹ ಖಂಡಿಸಿ ಪ್ರಕರಣ ದಾಖಲು.

ಕಾರ್ಕಳ : ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿ ನಿಟ್ಟೆ ಶಿಕ್ಷಣ ಸಂಸ್ಥೆಯ ಮಹಿಳಾ ಹಾಸ್ಟೆಲ್ ನ ಶೌಚಾಲಯ ಗೋಡೆಯ ಮೇಲೆ ದಿನಾಂಕ 07-05-2025 ರಂದು ರಾತ್ರಿ ಕೆಲವು ವಿದ್ಯಾರ್ಥಿನಿಯರು ದೇಶ ದ್ರೋಹ ಬರವಣಿಗೆಯನ್ನು ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟಲ್ ಕ್ಯಾಂಪಸ್ ಶೌಚಾಲಯ ಗೋಡೆಯಲ್ಲಿ ಕಂಡು ಬಂದಿತ್ತು. ಇದೊಂದು ದೇಶದ ಅಂತರಿಕ ಭದ್ರತೆಗೆ ಅನುಮಾನ ಸೃಷ್ಟಿಸುವ ಕೃತ್ಯವಾಗಿದ್ದು , ಇದನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ತ್ರೀವವಾಗಿ ಖಂಡಿಸಿದೆ.


ಪ್ರಸುತ ಸಂದರ್ಭದಲ್ಲಿ ದೇಶದಲ್ಲಿ ನಡೆಯುತಿರುವ ಸೈನ್ಯ ಹಾಗೂ ಕೇಂದ್ರ ಸರಕಾರದ ರಾಜತಾಂತ್ರಿಕ ನಿರ್ಧಾರಗಳನ್ನು ದೇಶದ ಎಲ್ಲಾ ನಾಗರಿಕರು ಪಕ್ಷಾತೀತವಾಗಿ ಬೆಂಬಲಿಸುತ್ತಿರುವ ಸಂದರ್ಭದಲ್ಲಿ ಎಲ್ಲರಲ್ಲೂ ದೇಶಾಭಿಮಾನವನ್ನು ಹೆಚ್ಚಿಸುತಿದ್ದು, ನಮ್ಮ ದೇಶದ ಸೈನ್ಯದ ತ್ಯಾಗ ಮತ್ತು ಸೇವೆಯನ್ನು ಇಡೀ ದೇಶವೇ ಕೊಂಡಾಡುತ್ತಿರುವುದು ಗಮನಾರ್ಹ ಸಂಗತಿ. ಇಂತಹ ಸಂದರ್ಭದಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಚಟುವಟಿಕೆ ಕಂಡು ಬಂದಿರುವುದು ಅವಮಾನಿಯ. ಈ ರೀತಿಯ ದೇಶ ದ್ರೋಹದ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ದೇಶದ್ರೋಹ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಅಂತಹ ವಿದ್ಯಾರ್ಥಿಗಳನ್ನು ಕಾಲೇಜ್ ನಿಂದ ಅಮಾನತುಗೊಳಿಸಬೇಕೆಂದು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಇದರ ಸ್ಥಾಪಮಾಧ್ಯಕರಾದ ಶಿವಕುಮಾರ್ ಖರ್ಜೆ ಮಾರ್ಗ ದರ್ಶನದಂತೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಹೆಜಮಾಡಿ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಉಡುಪಿ ಜಿಲ್ಲಾಧ್ಯಕ್ಷ ಸ್ವಯಂ ಶೆಟ್ಟಿ , ಪಧಾಧಿಕಾರಿಗಳಾದ ಸ್ಮರಣ್ ನಿಟ್ಟೆ ,ಅಭಿಲಾಷ್ ನಿಟ್ಟೆ , ಕಾರ್ಕಳ ತಾಲೂಕು ಅಧ್ಯಕ್ಷ ಪ್ರತೀಕ್ ಶೆಟ್ಟಿ , ಸನ್ನಿ ನೇಲ್ಸನ್ ಡಿಸೋಜ ಉಪಸ್ಥಿತರಿದ್ದರು.

Related posts

Leave a Comment