Mangalore and Udupi news
ಅಪರಾಧದೇಶ- ವಿದೇಶ

ಪಾಕಿಸ್ತಾನದ ಭವಿಷ್ಯ ನೀವೇ ನಿರ್ಧರಿಸಿ ಎಂದು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ನರೇಂದ್ರ ಮೋದಿ.

ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಲೇ ಬೇಕು ಎಂದು, ಪಾಕಿಸ್ತಾನದ ಮೇಲೆ ಯುದ್ಧ ಮಾಡಲೇಬೇಕು ಎಂಬುದು ಭಾರತೀಯರ ಆಕ್ರೋಶ. ಈ ಎಲ್ಲಾ ಪ್ರಶ್ನೆಗಳಿಗೆ ಮೋದಿ ಸರ್ಕಾರ ಸ್ಪಂದಿಸಿದೆ. ಭಾರತೀಯ ಸೇನೆಯ ಕೈಯಲ್ಲಿ ಪಾಕಿಸ್ತಾನದ ಭವಿಷ್ಯ ಅಡಗಿದೆ ಎಂದರೆ ತಪ್ಪಾಗದು. ಏಕೆಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಮಹತ್ವದ ಮೀಟಿಂಗ್!

ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುತ್ತೋ ಇಲ್ಲವೋ ಎಂಬ ಪ್ರಶ್ನೆಗೆ ಮೋದಿ ನೇತೃತ್ವದ ಮಹತ್ವದ ಮೀಟಿಂಗ್ ಉತ್ತರ ನೀಡಿದ್ದು ನಿಜ. ಶತಕೋಟಿ ಭಾರತೀಯರನ್ನು ಕಾಡುತ್ತಿರುವ ಪ್ರಶ್ನೆಗೆ ಒಂದೇ ಮೀಟಿಂಗ್ ನಲ್ಲಿ ಉತ್ತರ ನೀಡಿದ್ದಾರೆ ನರೇಂದ್ರ ಮೋದಿ. ಭಾರತೀಯ ಸೇನೆಯ ಕೈಯಲ್ಲಿ ಪಾಕಿಸ್ತಾನದ ಭವಿಷ್ಯ ಅಡಗಿದೆ! ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಮಹತ್ವದ ಮೀಟಿಂಗ್. ಪ್ರಧಾನಿ ನರೇಂದ್ರ ಮೋದಿ ಇಂದು ಹೈವೋಲ್ಟೇಜ್ ಮೀಟಿಂಗ್ ನಡೆಸಿ, ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಮುನ್ನುಡಿ ಬರೆದಿದ್ದಾರೆ. ಮೂರು ವಿಭಾಗಗಳ ಸೇನಾ ಮುಖ್ಯಸ್ಥರ ಜೊತೆ ಮಹತ್ವದ ಚರ್ಚೆ ನಡೆಸಿದ ನಮೋ, ಪಾಕ್ ಮೇಲೆ ಯುದ್ಧ ಮಾಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಿದ್ದು, ಈ ವೇಳೆ ಭಾರತೀಯ ಸೇನೆಗೆ ಪ್ರಧಾನಿ ಮೋದಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಅಷ್ಟೂ ಜನರ ಆತ್ಮಕ್ಕೆ ಶಾಂತಿ ನೀಡಲು ಭಾರತೀಯ ಸೇನೆ ಸಿದ್ಧವಾಗಿದೆ. ಭಯೋತ್ಪಾದಕರ ಪಾಲನೆ ಮಾಡೋ ಪಾಕಿಸ್ತಾನಕ್ಕೆ ಈ ಮೀಟಿಂಗ್ ನಿಂದ ನಡುಕ ಉಂಟಾಗಿರೋದು ಅಂತೂ ಸತ್ಯವೇ ಹೌದು.

Related posts

Leave a Comment