ಉಡುಪಿ ಎ 02 :- ಉಡುಪಿ ಜಿಲ್ಲೆಯ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಈಗಾಗಲೇ ಪೈಓವರ್ ನಿರ್ಮಿಸುವಂತೆ ಪ್ರತಿಭಟನೆ ಹಾಗೂ ಮನವಿಯನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ವತಿಯಿಂದ ಮವವಿ ಸಲ್ಲಿಸಿದ್ದು.. ಈ ವಿಚಾರವಾಗಿ ಯಾರೂ ಕೂಡ ಗಮನ ಹರಿಸದಿದ್ದದ್ದು ಬೇಸರ ಸಂಗತಿಯಾಗಿದೆ. ಆಭಾಗದಲ್ಲಿ ದಿನೇ ದಿನೇ ಅಪಘಾತಗಳು ಜಾಸ್ತಿಯಾಗುತ್ತಿದ್ದು ದಿನಾಂಕ: 01-04-2025ರಲ್ಲಿ ಬೆಳಿಗ್ಗೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆಗೆ ಹೋಗುವ ಸಂದರ್ಭದಲ್ಲಿ ರಸ್ತೆದಾಟುವಾಗ ಬ್ರಹ್ಮಾವರ ಎಸ್.ಎಂ.ಎಸ್ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ವಂಶಿ ಜಿ. ಶೆಟ್ಟಿ ಎಂಬ ಬಾಲಕನು ಅಪಘಾತದಲ್ಲಿ ಸಾವನಪ್ಪಿದ್ದು ಈ ಬಾಲಕನ ಕುಟುಂಬದವರಿಗೆ ಯಾವುದೇ ಪರಿಹಾರ ನೀಡದಿರುವುದರಿಂದ ಈ ಕೂಡಲೆ ಜಿಲ್ಲಾಡಳಿತ ಮತ್ತು ಸಂಬಂದ ಪಟ್ಟ ಇಲಾಖೆಯಿಂದ ಪರಿಹಾರ ಒದಗಿಸಿ ಕೊಡುವಂತೆ ಹಾಗೂ ಆ ಭಾಗದಲ್ಲಿ ಪೈಓವರ್ ನಿರ್ಮಿಸುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಈ ವಿಚಾರದಲ್ಲಿ ತಕ್ಷಣವೇ ಕ್ರಮ ಕೃೆಗೂಳ್ಳುತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಸ್ಥಾಪಕ ಶಿವ ಕುಮಾರ್ ಕರ್ಜೆ , ಗೌರವ ಸಲಹೆಗಾರ ವಿಶ್ವಾಸ್ ಅಮೀನ್ , ಸಂತೋಷ್ ಪಡುಬಿದ್ರಿ, ಉಡುಪಿ ತಾಲೂಕು ಅಧ್ಯಕ್ಷ ವಿದಿತ್ ನಾಗರಾಜ್, ಉಪಾಧ್ಯಕ್ಷ ಮನೀಷ್ ಪೂಜಾರಿ, ಕಾಲೇಜು ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ , ಕಿರಣ್ ಶೆಟ್ಟಿ , ಧನುಷ್ ಅಚಾರ್ಯ , ಸೌರಭ್ ಪೂಜಾರಿ ಉಪಸ್ಥಿತರಿದ್ದರು.