
ಸುರತ್ಕಲ್ : ಹಿಂದೂ ಯುವ ಸೇನೆ ಓಂಕಾರ ಘಟಕ ಸುರತ್ಕಲ್ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ದಿನಾಂಕ 16-02-2025 ರಂದು ನಡೆಯುವ “ಧರ್ಮ ಜಾಗೃತಿ ನಡೆ” 7 ನೇ ವರ್ಷದ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕಾಂತೇರಿ ದೈವಸ್ಥಾನದಲ್ಲಿ 24-01-2025 ನೇ. ಸಂಜೆ 6.30ಕ್ಕೆ ನಡೆಯಿತು.
ಈ ಸಮಾರಂಭದಲ್ಲಿ ಆಡಳಿತ ಮುಖ್ಯಸ್ಥರಾದ ಪಿ .ಟಿ ರೈ ಹಾಗೂ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋದರ ಚೌಟ ಹಾಗೂ ಉಪಾಧ್ಯಕ್ಷರಾದ ನಾಗರಾಜ್ ಆಚಾರ್ಯ ಕುಡುಮುರು ಶಾಖೆಯ ಅಧ್ಯಕ್ಷರು ಹಾಗೂ ಮುಖಂಡರು ಕೃಷ್ಣಾಪುರ ಶಾಖೆಯ ಅಧ್ಯಕ್ಷರು.ಹಾಗೂ ನಮ್ಮ ಶಾಖೆಯ ಮುಖಂಡರು ಹಾಗೂ ಸರ್ವ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ದಿನಾಂಕ 16-02-2025 ರಂದು ಸುರತ್ಕಲ್‌ನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನಕ್ಕೆ ಸಕಲ ಕಷ್ಟ ನಿವಾರಣೆಗೆ, ಲೋಕ ಕಲ್ಯಾಣಾರ್ಥ, ಧರ್ಮ ರಕ್ಷಣೆಗಾಗಿ ಪಣಂಬೂರು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನ ಸುರತ್ನಲ್‌ನಿಂದ ಕೃಷ್ಣಾಪುರ-ಕಾಟಿಪಳ್ಳ-ಸೂರಿಂಜೆ-ಶಿಬರೂರು-ಬಲವಿನಗುಡ್ಡೆ ಕಟ್ಟಿಯ ಬಲಕ್ಕೆ, ಕೊಡೆತ್ತೂರು, ಮಲ್ಲಿಗೆ ಅಂಗಡಿ ಮಾರ್ಗವಾಗಿ ಈ 7 ನೇ ವರ್ಷದ “ಧರ್ಮ ಜಾಗೃತಿ ನಡೆ” ಪಾದಯಾತ್ರೆ ನಡೆಯಲಿದೆ.