ಪುತ್ತೂರು : ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್(ರಿ.) ಆರ್ಲಪದವು ಪಾಣಾಜೆ ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ 26ನೇ ಸೇವಾ ಯೋಜನೆಯ ಹಣವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಕುಟುಂಬಕ್ಕೆ ನೀಡಿ ಸಹಾಯಹಸ್ತ ಚಾಚಿದ್ದಾರೆ.
ಗೋಳಿತೊಟ್ಟು ಕನ್ಯಾನ ನಿವಾಸಿ ಕೀರ್ತನ್ ಇವರು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಹೊಸ ಬೆಳಕು ತಂಡವು ದಾನಿಗಳಿಂದ ಸಂಗ್ರಹಿಸಿದ ಸಹಾಯ ಧನ ರೂ.20,000/- ಸಹಾಯಧನ ಚೆಕ್ ಹಸ್ತಾಂತರಿಸಿ ನೆರವಾಗಿದ್ದಾರೆ.
ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್(ರಿ.) ಸಾಮಾಜಿಕ ಕಳಕಳಿಗೆ ಸ್ಪಂದಿಸಿ ತನು ಮನ ಧನ ಸಹಾಯ ನೀಡಿ ಸಹಕರಿಸಿದ ಎಲ್ಲಾ ಆತ್ಮೀಯ ಸಹೃದಯಿ ದಾನಿಗಳಿಗೆ ಮನದಾಳದ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ನನ್ನ 100 ರೂಪಾಯಿಂದ ಏನಾಗುತ್ತೇ ಎನ್ನುವ ಅಥವಾ ಸಮಾಜದ ಕಷ್ಟದ ಅರಿವಿದ್ದು ಸುಮ್ಮನಿರುವ ಸಹೃದಯಿ ಬಂಧುಗಳೇ ನಿಮ್ಮ ಅಮೂಲ್ಯವಾದ 100ರೂಪಾಯಿಂದಲೇ ಇಂದು ಆ ಕುಟುಂಬದ ಮುದ್ದುಕಂದಮ್ಮನ ಮೊಗದಲ್ಲಿ ಆತ್ಮವಿಶ್ವಾಸದ ಒಂದು ಆಶಾಕಿರಣ ಕಾಣುವಂತಾಯಿತು ಎಂದು ಹೊಸ ಬೆಳಕು ಬಡವರ ಆಶಾಕಿರಣ ತಂಡ ಮನವಿ ಮಾಡಿದ್ದಾರೆ.