Mangalore and Udupi news
ಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಸುರತ್ಕಲ್: ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಯೋಗ ಸೂರ್ಯ ನಮಸ್ಕಾರ

ಸುರತ್ಕಲ್: ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಯೋಗ ಸೂರ್ಯ ನಮಸ್ಕಾರದ ಕಾರ್ಯಕ್ರಮ ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯ ಸುರತ್ಕಲ್ ನಗರದಿಂದ ದಿನಾಂಕ 04 ಫೆಬ್ರವರಿ ೨೦೨೫ ಮಂಗಳವಾರದಂದು ಶ್ರೀ ಸಾರಾಳಧೂಮಾವತಿ ದೈವಸ್ಥಾನ (ರಿ)7 ಬ್ಲಾಕ ಕೃಷ್ಣಾಪುರ ಇಲ್ಲಿ ಸಾಮೂಹಿಕ 108 ಮಂತ್ರಗಳ ಜೊತೆ 108 ಯೋಗ ಸೂರ್ಯ ನಮಸ್ಕಾರಕಾರ್ಯಕ್ರಮವನ್ನು ನಡೆಸಲಾಯಿತು.

ಬೆಳಿಗ್ಗೆ 4:30ಕ್ಕೆ ಭಜನೆ ,ಅಮೃತವಚನ ಪಂಚಾಂಗ ಪಠಣ ಹಾಗೂ ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದೈವಸ್ಥಾನದ ಉಪಾಧ್ಯಕ್ಷರಾದ ಶ್ರೀಯುತ ದೇವೇಂದ್ರ.ಡಿ. ಕೋಟ್ಯಾನ್ ದೀಪ ಪ್ರಜ್ವಲನೆಯನ್ನು ಮಾಡಿದರು.

ಕಾರ್ಯಕ್ರಮದ ಸಹ ಸಂಚಾಲಕರಾದ ಶ್ರೀಮತಿ ಸುಜಾತ, ನಗರದ ಸಂಚಾಲಕರಾದ ಶ್ರೀಮತಿ ಶ್ಯಾಮಲ, ಜಿಲ್ಲಾ ಮಾತೃ ಪೂಜನ ಪ್ರಮುಖರಾದ ಶ್ರೀಮತಿ ಶೋಭ, ನಗರ ವಿಸ್ತರಣಾ ಪ್ರಮುಖರಾದ ರಾಘವೇಂದ್ರ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ರಥಸಪ್ತಮಿಯ ಪ್ರಯುಕ್ತ 108 ನಮಸ್ಕಾರ ಮತ್ತು ಮಂತ್ರದ ಮಹತ್ವವನ್ನು ಶ್ರೀಮತಿ ಸುನಂದ ಶ್ರೀ ಕೃಷ್ಣ ಭಜನಾ ಮಂದಿರ ಶಾಖೆ ಕೃಷ್ಣಾಪುರ ಇವರು ತಿಳಿಸಿದರು.

ನಗರ ಶಿಕ್ಷಣ ಪ್ರಮುಖರಾದ ಸುಮನ ಇವರು ಮಾರ್ಗದರ್ಶನದೊಂದಿಗೆ 108 ಸೂರ್ಯ ನಮಸ್ಕಾರ ಮತ್ತು ಮಂತ್ರದ ಅಭ್ಯಾಸವನ್ನು ಸುರತ್ಕಲ್ ನಗರದ ಪ್ರಮುಖರು, ನಗರದ 15 ಶಾಖೆಯ ಶಾಖ ಪ್ರಮುಖರು ಮತ್ತು ಶಾಖ ಶಿಕ್ಷಕರು ಮತ್ತು ಪ್ರಾತ್ಯಕ್ಷಿಕೆಯಲ್ಲಿ ಶಾಖ ಯೋಗ ಬಂಧುಗಳು ಜೋಡಿಸಿಕೊಂಡಿದ್ದರು.

ಸುಮಾರು 250 ಯೋಗಬಂಧುಗಳು 108 ಮಂತ್ರವನ್ನು ಪಠಣ ಮಾಡುವ ಮೂಲಕ 108 ಸೂರ್ಯ ನಮಸ್ಕಾರವನ್ನು ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಅಶೋಕ ವಂದಿಸಿದರು. ಶ್ರೀಮತಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

Leave a Comment