ಕುಳಾಯಿ ಪುರಾತನ ಕೋಟೆದ ಬಬ್ಬು ದೈವಸ್ಥಾನದ ನೇಮೋತ್ಸವ ಪ್ರಯುಕ್ತ ತಾ. 11/03/2025ನೇ ಮಂಗಳವಾರ ಕಂಬೆರ್ಲ ಕಲ ಏರುವುದು ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಬಬ್ಬು ಕೆರೆಯ ಉದ್ಘಾಟನೆಯನ್ನು ಕುಳಾಯಿ 9 ನೇ ವಾರ್ಡ್ ಕಾರ್ಪೊರೇಟರ್ ಶ್ರೀಮತಿ ವೇದಾವತಿ ಹಾಗೂ ಶಾಸಕರ ಅನುದಾನದಿಂದ ದೈವಸ್ಥಾನಕ್ಕೆ ಒಳ ಬರುವ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಪಟೇಲ್ ಶಂಕರ್ ರೈಯವರು ಸಾಂಕೇತಿಕವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರಾದ ದಿವಾಕರ ಶೆಟ್ಟಿ ಬಾಳಿಕೆ ಮನೆ, ಅಧ್ಯಕ್ಷರಾದ ಯೋಗೀಶ್ ಕುಳಾಯಿ, ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್, ಕೋಶಾಧಿಕಾರಿ ಗಿರೀಶ್ ಕರ್ಕೇರ, ಕುಳಾಯಿ ಗುತ್ತು ಜಗನ್ನಾಥ ಶೆಟ್ಟಿ
ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು, ಅರ್ಚಕವೃಂದ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿನ್ನಿತರು ಉಪಸ್ಥಿತರಿದ್ದರು. ಯೋಗೀಶ್ ಸನಿಲ್ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.
ನಂತರ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
