ಕೇಶವ ಶಿಶುಮಂದಿರ ಸೇವಾ ಟ್ರಸ್ಟ್ (ರಿ ) ಕುಳಾಯಿ.
ಇದರ ನೂತನ ಶಿಶುಮಂದಿರ ಮತ್ತು ಟ್ರಸ್ಟಿನ ಸೇವಾ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಹೊಸ ಸಮಿತಿಯನ್ನು ರಚಿಸಲಾಯಿತು.
ದಿನಾಂಕ 09-03-2025 ರ ಆದಿತ್ಯವಾರ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ಜರಗಿದ ಸಭೆಯಲ್ಲಿ
ಗೌರವಾಧ್ಯಕ್ಷರಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ.ವೈ. ಭರತ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಅದೇ ರೀತಿ ವೇದಮೂರ್ತಿ ಶ್ರೀ ನಾಗೇಂದ್ರ ಭಾರಧ್ವಾಜ್ ರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತಗಳಿಂದ ಆಯ್ಕೆಮಾಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷರಾಗಿ ಶ್ರೀ ಜಯಪ್ರಕಾಶ್ ಸೂರಿಂಜೆ ,
ಪ್ರಧಾನ ಕಾರ್ಯದರ್ಶಿಗಳಾಗಿ
ಶ್ರೀ ರಾಜೇಶ್ ಬೈಕಂಪಾಡಿ .
ಕೋಶಾಧಿಕಾರಿಗಳಾಗಿ ಶ್ರೀ ರಾಜೇಶ್ ಮುಕ್ಕ,
ಸಂಚಾಲಕರಾಗಿ ಯೋಗೀಶ್ ಸನಿಲ್ ಕುಳಾಯಿ, ಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ಧು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು
ಪ್ರಾರ್ಥನೆಯನ್ನ
ಕುಮಾರಿ ಅನಘ ಐತಾಳ್ ನೆರವೇರಿಸಿದರು .
ಶ್ರೀ ಯೋಗೀಶ್ ಸನಿಲ್ ಅತಿಥಿಗಳನ್ನು ಸ್ವಾಗತಿಸಿದರು.
ಕೇಶವ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉದಯನಾರಾಯಣ. ಎಸ್. ಪ್ರಸ್ತಾವನೆಗೈದರು
ಮತ್ತು
ಟ್ರಸ್ಟ್ ನ ಕಾರ್ಯದರ್ಶಿ
ಶ್ರೀ ಯಜ್ನೇಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು.