ಉಡುಪಿ ಜಿಲ್ಲೆಯ ಲಚ್ಚಿಲ್ ಪುತ್ತೂರು ಎಂಬ ಪ್ರದೇಶದಲ್ಲಿ ಮಂತ್ರದೇವತೆ ದೈವಸ್ಥಾನವಿದ್ದು, ಆ ಊರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಅನೇಕ ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಕೆಲ ವ್ಯಕ್ತಿಗಳು, ಅಲ್ಲಿ ಇದ್ದಂತಹ ಕಬ್ಬಿಣದ ಊರುಗೋಲಿನಲ್ಲಿ ಬೋರ್ಡ್ ಹಾಕಿ” ಮಂತ್ರದೇವತೆ ಸಾನಿಧ್ಯ ಲಚ್ಚಿಲ್” ಎಂದು ಬರೆದಿದ್ದ ಬೋರ್ಡ್ ಹಾನಿಗೊಳಿಸಿ, ಪೈಂಟಿಂಗ್ ಕೆರೆದು ಅದರ ಕಸವನ್ನು ಅಲ್ಲೇ ಹಾಕಿ, ಕೋಮುಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಲಚ್ಚಿಲ್ ಪ್ರದೇಶದ ನಿವಾಸಿ ಮಹೇಶ್ ಎಂಬವರು ಏಪ್ರಿಲ್ 18 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾನ್ಯ ಉಡುಪಿ ಪೊಲೀಸ್ ಇಲಾಖೆ ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಂಡು, ಕೋಮುಗಲಭೆಗೆ ಹುನ್ನಾರ ನೀಡಲು ಈ ರೀತಿ, ದೈವಶಕ್ತಿಯ ಬೋರ್ಡ್ ಹಾನಿ ಮಾಡಿರುವ ಆರೋಪಿಯನ್ನು ಪತ್ತೆ ಹಚ್ಚಿ ಲಚ್ಚಿಲ್ ಪ್ರದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

previous post