ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಆಶ್ರಯದಲ್ಲಿ ಫ್ರೆಂಡ್ಸ್ ಕೋಡಿಕೆರೆ (ರಿ), ಕೋಡಿಕೆರೆ, ಕುಳಾಯಿ ಸಹಕಾರದೊಂದಿಗೆ ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ, ಮಂಗಳಾದೇವಿ ಇದರ ಸಹಯೋಗದೊಂದಿಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಶಿಬಿರ ಯೆನಪೋಯ ದಂತ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರ ತಂಡದವರಿಂದ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಯೋಜಕರು ತಿಳಿಸಿದ್ದಾರೆ.
ದಿನಾಂಕ : 06-04-2025 ಆದಿತ್ಯವಾರ ಬೆಳಗ್ಗೆ 9-30ರಿಂದ 12-30 ವರೆಗೆ ಸ್ಥಳ : ಪೆರ್ಮುದೆ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ರಿ.), MSEZ ಕಾಲನಿ, ಕೋಡಿಕೆರೆ, ಕುಳಾಯಿ ಇಲ್ಲಿ ನಡೆಯಲಿದೆ.
ಉಚಿತ ಚಿಕಿತ್ಸೆಗಳ ವಿವರ :
• ಚರ್ಮ, ಎಲುಬು, ಕಣ್ಣು ಕಿವಿ, ಮೂಗು, ಗಂಟಲು ಸ್ತ್ರೀ ರೋಗ ಚಿಕಿತ್ಸೆ
• ಮಕ್ಕಳ ಚಿಕಿತ್ಸೆ ಜನರಲ್ ಚೆಕ್ ಅಪ್
• ದಂತ ಚಿಕಿತ್ಸೆ ಮತ್ತು ತಪಾಸಣೆ ಮಾಡಲಾಗುವುದು ಅಗತ್ಯವುಳ್ಳವರಿಗೆ ಕನ್ನಡಕ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುದು.
ಈ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಶ್ರೀಶಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.. ಉರ್ವಸ್ಟೋರ್, ಮಂಗಳೂರು, ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಫ್ರೆಂಡ್ಸ್ ಕೋಡಿಕೆರೆ (ರಿ) ಇವರು ವಿನಂತಿಸಿಕೊಂಡಿದ್ದಾರೆ.