Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಮಂಗಳೂರು: ಆನ್‌ಲೈನ್ ವಂಚನೆ – ಆರೋಪಿ ಸೆರೆ.!!

Advertisement

ಮಂಗಳೂರು : ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಕೇರಳದ ತ್ರಿಶೂರಿನ ನಿಧಿನ್ ಕುಮಾರ್ ಕೆ.ಎಸ್ ನನ್ನು ಬಂಧಿಸಿದ್ದಾರೆ.

ಆರೋಪಿ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಶೇರು ಮಾರುಕಟ್ಟೆಯ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯುವ ಭರವಸೆ ನೀಡಿ ದೂರುದಾರರಿಗೆ 10.32 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಮಂಗಳೂರು| ಆನ್‌ಲೈನ್ ವಂಚನೆ ಪ್ರಕರಣ: ಆರೋಪಿ ಸೆರೆ

ಹಲವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಕಮಿಷನ್ ಆಧಾರದ ಮೇಲೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು.

ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇತರ ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ.

Related posts

Leave a Comment