ಶಾಲೆಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆಯಾ?
ಏನೂ ಅರಿಯದ ಎಳೆವಯಸ್ಸಿನ ಮಕ್ಕಳ ಮೆದುಳಿನಲ್ಲಿ ಧರ್ಮಾಂಧತೆ, ಮೌಢ್ಯ ತುಂಬಲಾಗುತ್ತಿದೆಯಾ?
ಹೌದು. ಚಾಮರಾಜನಗರ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಳೆವಯಸಿನ ಮಗುವಿನ ಮಾತು ಕೇಳಿದ್ರೆ ಎಂಥವರನ್ನು ಬೆಚ್ಚಿಬಿಳಿಸುತ್ತೆ ಅಆಇಈ ಎಬಿಸಿಡಿ, ಆಟ-ಪಾಠ ಅಂತ ಆಡುತ್ತಾ ಕಲಿಬೇಕಾದ ಈ ಚಿಕ್ಕಮಕ್ಕಳಿಗೆ ಧರ್ಮಾಂಧತೆ, ಮೌಢ್ಯ ತುಂಬಿದವರು ಯಾರು?
ಬುರ್ಖಾ ಧರಿಸೋದ್ರಿಂದ ಸತ್ತಮೇಲೆ ಶವಕ್ಕೆ ಏನೂ ಆಗೋಲ್ಲ, ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು ಚೇಳು ತಿನ್ನುತ್ತವೆ’ ಎಂಬ ಈ ಮಾತು ಹೇಳಿದ್ದು ವಯಸ್ಕ ಮಹಿಳೆಯಲ್ಲ ಬದಲಾಗಿ ಶಾಲೆಗೆ ಹೋಗುತ್ತಿರುವ ಚಿಕ್ಕ ಮಗು. ಚಾಮರಾಜನಗರ ಖಾಸಗಿ ಶಾಲೆಯೊಂದರ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಅಘಾತಕಾರಿ ನಡೆದಿದೆ ಎನ್ನಲಾಗಿದೆ.
‘ಶಿಕ್ಷಣದೊಂದಿಗೆ ಧರ್ಮಾಂಧತೆ ಬೆರೆಸಬೇಡಿ’ ಈ ರೀತಿ ಕೆಲ ರಾಜಕಾರಣಿಗಳು ಹೇಳುತ್ತಾರೆ. ಆದರೆ ಇದು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯಿಸಲಾಗಿದೆಯೇ? ಶಾಲೆಗಳಲ್ಲಿ ಹಿಂದು ಸಂಪ್ರಾದಯ, ಆಚಾರ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಸ್ವಲ್ಪವೂ ಉಲ್ಲೇಖಿಸಿದರೆ ಗದ್ದಲ ಎಬ್ಬಿಸುವವರು, ಜಾತ್ಯಾತೀತೆ ಬಗ್ಗೆ ಮಾತಾಡ್ತಾರೆ. ಆದ್ರೆ ಕೆಲವು ಶಾಲೆಗಳಲ್ಲಿ ಸ್ಪಷ್ಟವಾಗಿ ಧಾರ್ಮಿಕ ಮತಾಂಧತೆ ನಡೆದಾಗ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಈ ದ್ವಿಮುಖತೆಯನ್ನು ಖಂಡಿಸಬೇಕಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಡಿಕೆ ಶಿವಕುಮಾರ ನೇತೃತ್ವದ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಇಂಥ ಉಗ್ರವಾದ ಬೇರೂರಲು ಅವಕಾಶ ನೀಡಿದ್ದಕ್ಕೆ ಅವರೇ ಜವಾಬ್ದಾರರಾಗಬೇಕು. ಶಾಲೆಗಳಲ್ಲಿ ಈ ರೀತಿಯ ದ್ವೇಷವನ್ನು ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಪ್ರವೃತ್ತಿ ಮುಂದುವರಿದರೆ, ಕರ್ನಾಟಕದ ಭವಿಷ್ಯದ ಪೀಳಿಗೆಗಳು ಸಾಮುದಾಯಿಕ ದ್ವೇಷವನ್ನು ಸಾಮಾನ್ಯವೆಂದು ಪರಿಗಣಿಸುವ ಅಪಾಯವಿದೆ. ಕೈಮೀರುವ ಮೊದಲು ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.