Mangalore and Udupi news
ಅಪರಾಧರಾಜ್ಯ

47 ಲೋಹದ ದೇವರ ಮೂರ್ತಿಗಳ ಕಳ್ಳತನ – 24 ಗಂಟೆಯೊಳಗೆ ಕಳ್ಳರು ಅರೆಸ್ಟ್

Advertisement

ಅಂಕೋಲಾ: ಮನೆಯಲ್ಲಿ ಮಲಗಿದ್ದಾಗಲೇ ಒಳನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಲೋಹದ ಮೂರ್ತಿಗಳು ಸೇರಿದಂತೆ ಹಲವು ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಕಳ್ಳತನ ನಡೆದ 24 ಗಂಟೆಯೊಳಗೆ ಕಳ್ಳರ ಗ್ಯಾಂಗ್‌ನ್ನು ಪೊಲೀಸರು ಹಿಡಿದಿದ್ದು ಶ್ಲಾಘನೆ ವ್ಯಕ್ತವಾಗುತ್ತಿದೆ. ಬಂಧಿತ ಕಳ್ಳರನ್ನು ಚಿ. ಶ್ರೀನಿವಾಸ, ಅಶೋಕ, ಮೌಲಾಲಿ, ಮುಬಾರಕ, ಎ.ಎಸ್. ಶೇಖ್ ಶರೀಫ್, ಫುರಖಾನ ಎಂದು ಗುರುತಿಸಲಾಗಿದೆ.

ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾ ಪಂ ವ್ಯಾಪ್ತಿಯ ತಿಂಗಳಬೈಲ್ ನ ವಿಠಲ್ ವಾಸು ಬಾಂದಿ ಇವರ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಒಳಗೆ ನುಗ್ಗಿದ ಕಳ್ಳರು ದೇವರ ಕೋಣೆಯ ಬೀಗ ಮುರಿದು ಅಲ್ಲಿದ್ದ ಲಕ್ಷಾಂತರ ಮೌಲ್ಯ ಬೆಲೆಬಾಳುವ ಸುಮಾರು 47 ಲೋಹದ ಮೂರ್ತಿಗಳ , 5 ಕಪಿಲ್ ಕಲ್ಲು ಗುಂಡುಗಳು, ಮತ್ತು ಮೊಬೈಲ್ ಒಂದನ್ನು ಕಳವು ಮಾಡಿದ್ದರು. ಈ ಬಗ್ಗೆ ಮನೆ ಮಾಲೀಕ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಕಳ್ಳತನ ನಡೆದು ಪ್ರಕರಣ ದಾಖಲಾದ ಬೆನ್ನಿಗೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು , 24 ಗಂಟೆಯ ಒಳಗೆ ಕಳ್ಳತನದ ಜಾಡು ಬೇಧಿಸಿ ಯಶಸ್ವಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಂಧಿತ ಆರೋಪಗಳಿಂದ ಕೃತ್ಯಕ್ಕೆ ಬಳಸಲಾದ ಇನ್ನೋವಾ ಕ್ರೀಸ್ಟಾ ಕಾರು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಮಹೀಂದ್ರಾ ಕಾರು, ಡಿಯೋ ಸ್ಕೂಟರ್, ವಾಹನಗಳಲ್ಲಿ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಒAದೇ ಮನೆಯಲ್ಲಿರುವ ಮೂರ್ತಿಗಳು ಬಂಗಾರದ್ದಿರಬಹುದು, ಇಲ್ಲವೇ ಪುರಾತನ ಕಾಲದ ಲೋಹದ ಮೂರ್ತಿಗಳಿರಬಹುದು ಎಂದು, ಕೋಟಿ ಕೋಟಿ ಮೌಲ್ಯದ ಲೆಕ್ಕಾಚಾರ ಹಾಕಿ, ಕಳ್ಳತನ ಕೃತ್ಯದಲ್ಲಿ ತೊಡಗಿಸಿಕೊಂಡವರು ಸಿಕ್ಕಿಬಿದ್ದಿದ್ದಾರೆ. ಕಳ್ಳತನ ಆರೋಪದಡಿ ಸಿಕ್ಕಿಬಿದ್ದ ಕುಖ್ಯಾತ ಗ್ಯಾಂಗಿನಲ್ಲಿ, ಪಕ್ಕದ ರಾಜ್ಯ ಗೋವಾದ ಕ್ಯಾಸಿನೋ ಹುಚ್ಚಿನ ಮೋಜು ಮಸ್ತಿ ಮಾಡುವವರು. ಇದರಲ್ಲಿ ಕೆಲವರು ಸರ್ಕಾರಿ ನೌಕರ ಸೇರಿದಂತೆ ಬೇರೆ ಬೇರೆಯವರು ಇದ್ದಾರೆ ಎನ್ನಲಾಗುತ್ತಿದೆ.

ಬಾಂದಿ ಮನೆತನದವರು ದೇವರನ್ನು ಪೂಜಿಸಿಕೊಂಡು ಬಂದಿದ್ದು, ದೇವರು ಕಾರ್ಣಿಕ ತೋರಿಸಿದ್ದಾರೆ. ಕದ್ದ ವಸ್ತುಗಳು 24 ಗಂಟೆಯೊಳಗೆ ಸಿಕ್ಕಿರುವುದು ದೇವರ ಶಕ್ತಿಯಿಂದ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Related posts

Leave a Comment