ಕರ್ಮಚಾರಿ ಸಂಘದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಾಳ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮಹಿಳಾ ಕಾರ್ಮಿಕ ಆಫೀಸರ್ ವಿಲ್ಮಾ ಎಲಿಜಬೆತ್ ಮತ್ತು ಎಂ.ಆರ್.ಪಿ.ಎಲ್. ಮಾನವ ಸಂಪನ್ಮೂಲ ವಿಭಾಗದ ಜಿಎಂ ಸೌಮ್ಯ ಚಂದ್ರಶೇಖರ್, ಮತ್ತು ಎಂಆರ್‌ಪಿಎಲ್ ನ ಹಿರಿಯ ಮಹಿಳಾ ಆಫೀಸರ್ ಎಕ್ಸಿಕ್ಯೂಟಿವ್ ಡೈರಕ್ಟರ್ ಅವರ ಆಪ್ತ ಸಹಾಯಕಿ ಸಾರಿಕಾ ಶ್ರೀಮತಿ ದೀಪಿಕ, ಕರ್ಮಚಾರಿ ಸಂಘದ ಉಪಾಧ್ಯಕ್ಷರಾಗಿರುವ ಶ್ರೀ ಸುರೇಶ್ ಕರ್ಮಚಾರಿ ಸಂಘದ ಮಹಿಳಾ ಪ್ರತಿನಿಧಿಗಳಾಗಿರುವ ಶ್ರೀಮತಿ ಸುಜಾತ ಮತ್ತು ಶ್ರೀಮತಿ ಮಮತಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಸ್ವಾತಿ ನಿರೂಪಿಸಿದರು ಸೌಮ್ಯ ಸ್ವಾಗತಿಸಿದರು ಮತ್ತು ಕರ್ಮಚಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ಕರ್ಮಚಾರಿ ಸಂಘದ ಹೆಚ್ಚಿನ ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಸಭಾ ಕಾರ್ಯಕ್ರಮದ ನಂತರ ಕರ್ಮಚಾರಿ ಸಂಘದ ಮಹಿಳಾ ಸದಸ್ಯರಿಂದ ವರ್ಣ ರಂಜಿತ ಅದ್ದೂರಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.