Mangalore and Udupi news
ದಕ್ಷಿಣ ಕನ್ನಡಮಂಗಳೂರು

ಮೂಡಬಿದ್ರೆ ಭಜರಂಗದಳದ ನಗರ ಸಂಯೋಜಕ ವಿಜೇಶ್ ಮೂಡಬಿದ್ರೆ ನಿಧನ

ಮೂಡಬಿದ್ರಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಮೂಡಬಿದ್ರೆಯ ನಗರ ಸಂಯೋಜಕರಾಗಿದ್ದ ವಿಜೇಶ್ (30) ನಿಧನರಾಗಿದ್ದಾರೆ.

ಭಜರಂಗದಳದಲ್ಲಿ ಸಕ್ರಿಯರಾಗಿದ್ದ ಇವರು ಸಂಘಟನೆಯ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು.

ಪುತ್ತಿಗೆ ಶ್ರೀ ಸೋಮನಾಥೇಶ್ವರನ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಮಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಪಟ್ಟು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಜೇಶ್ ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ನಗರ ಸಂಯೋಜಕ ಸಮಾಜಮುಖಿ ಚಿಂತನೆಯುಳ್ಳ ಸಕ್ರಿಯ ಕಾರ್ಯಕರ್ತ ವಿಜೇಶ್ ಅವರ ನಿಧನಕ್ಕೆ ಹಲವಾರು ಗಣ್ಯರು, ಭಜರಂಗದಳದ ಮುಖಂಡರು ಸಂತಾಪ ಸೂಚಿಸಿದ್ದಾರೆ.

Related posts

Leave a Comment