Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮೂಲ್ಕಿ: “ಯುವ ಸಂಚಲನ” ಉದ್ಯಮಶೀಲತಾ ಕಾರ್ಯಗಾರ


ಮೂಲ್ಕಿ : ಜೈ ಶ್ರೀಕೃಷ್ಣ ಸುಧಾಮ ವೆಲ್ಫೇರ್ ಫೌಂಡೇಶನ್ (ರಿ.), ಮೂಲ್ಕಿ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ “ಯುವ ಸಂಚಲನ” ಕೇಂದ್ರ ಸರಕಾರದ ವಿವಿಧ ಸ್ವಉದ್ಯೋಗ ಯೋಜನೆಗಳ ಉಪಯುಕ್ತ ಮಾಹಿತಿ ಶಿಬಿರ ಉದ್ಯಮಶೀಲತಾ ಕಾರ್ಯಗಾರ ನಡೆಯಲಿದೆ.

ದಿನಾಂಕ 21.01.2025ರಂದು ಶ್ರೀ ಅನ್ನಪೂರ್ಣೇಶ್ವರಿ ಸಭಾಭವನ ಬಪ್ಪನಾಡು ಮುಲ್ಕಿಯಲ್ಲಿ ನಡೆಯಲಿದ್ದು, ಸ್ವಉದ್ಯಮ ವಿಚಾರ ವಿನಿಮಯ, ಸಮಾರೋಪ ಸಮಾರಂಭ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪ್ರಮಾಣ ಪತ್ರ ವಿತರಣೆ ನಡೆಯಲಿದೆ.

ಮುಲ್ಕಿಯ ಸಮಾನಮನಸ್ಕರ ತಂಡ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಸುಧಾಮ ಫೌಂಡೇಶನ್ ಎಂಬ ನಾಮಾಂಕಿತದೊoದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಸಣ್ಣಸಣ್ಣ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದು ಬಳಿಕ ಜೈ ಶ್ರೀಕೃಷ್ಣ ಸುಧಾಮ ವೆಲ್ವೇರ್ ಫೌಂಡೇಶನ್ (ರಿ.) ಹೆಸರಿನಲ್ಲಿ ಮರುನಾಮಕರಣಗೊಂಡಿತು.

2024/25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸುಮಾರು 10ಲಕ್ಷ ಬಜೆಟಿನ 5ಮಹಾ ಯೋಜನೆ ಇವರ ಸಂಕಲ್ಪವಾಗಿದೆ. 100ಅಧಿಕ ಯುವಕ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ. ಮಹಿಳಾ ಸಬಲೀಕರಣ ಧೈಯದೊಂದಿಗೆ ಪರಿಸರ ಸ್ನೇಹಿ ಕೈಚೀಲ ತಯಾರಿಕೆಯ ಮೂಲಕ ಸ್ವಂತ ಉದ್ಯೋಗಕ್ಕೆ ಅವಕಾಶ.

ವಿಶ್ವ ಪರಿಸರ ದಿನದಂದು ಪರಿಸರ ಜಾಗೃತಿಗಾಗಿ 10,000ಕ್ಕೂ ಅಧಿಕ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ. ಪರಿಸರಕ್ಕೆ ಪೂರಕವಾಗಿ 15,000 ಅಧಿಕ ಪರಿಸರ ಸ್ನೇಹಿ ಕೈ ಚೀಲವನ್ನು ವಿವಿಧ ಸಂಘ-ಸAಸ್ಥೆಗಳಿಗೆ ನೀಡಿದ್ದಾರೆ. ದಿನಾಂಕ 2101.2025 ರಂದು ಮಂಗಳೂರಿನ ಮುಲ್ಕಿಯಲ್ಲಿ ಹೊಸ ಹೆಜ್ಜೆಯೊಂದಿಗೆ ಯುವ ಸಂಚಲನ ಎಂಬ ಕಾರ್ಯಕ್ರಮದ ಅಡಿಯಲ್ಲಿ ಆಸಕ್ತ 100ಕ್ಕೂ ಅಧಿಕ ಯುವಕ ಯುವತಿಯರಿಗೆ ಉದ್ಯಮಶೀಲತಾ ತರಬೇತಿ ಕಾರ್ಯಗಾರ ಹಮ್ಮಿಕೊಂಡಿರುತ್ತಾರೆ.

Advertisement

Related posts

Leave a Comment