Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಆನ್‌ಲೈನ್ ಗೇಮಿಂಗ್ ಹಿಂದೆ ಬಿದ್ದ ಯುವಕ ಆತ್ಮಹತ್ಯೆಗೆ ಶರಣು.!!

ಆನ್‌ಲೈನ್ ಗೇಮಿಂಗ್ ವ್ಯವಸನಕ್ಕೆ ಹಲವು ಜನರ ಜೀವನ ಬಲಿಯಾಗಿರುವ ಘಟನೆ ಎಷ್ಟೇ ಬಂದರು ಜನರು ಮತ್ತೆ ಮತ್ತೆ ಆನ್‌ಲೈನ್ ಗೇಮಿಂಗ್ ವ್ಯವಸನಕ್ಕೆ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಾರೆ. ಪ್ರವೀಣ ಎಂಬ ಯುವಕ ಆನ್‌ಲೈನ್ ಗೇಮಿಂಗ್‌ಗೆ ಚಟದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೊರ ವಲಯ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಪ್ರವೀಣ (19) ಎಂದು ಗುರುತಿಸಲಾಗಿದೆ.

ಯುವಕ ಪ್ರವೀಣ ಆನ್‌ಲೈನ್ ಗೇಮಿಂಗ್ ಹುಚ್ಚಿಗೆ ಬಿದ್ದು ಕಾಲೇಜಿಗೂ ಹೋಗದೇ ಮನೆಯಲ್ಲಿರುತ್ತಿದ್ದನು. ತಂದೆ-ತಾಯಿ ಹಾಗೂ ಮನೆಯವರು ಕೆಲಸಕ್ಕೆ ಹೋದ ನಂತರ ಮನೆಯ ಕೋಣೆಯಲ್ಲಿ ಕುಳಿತು ಆನ್‌ಲೈನ್ ಗೇಮ್ ಆಡುತ್ತಿದ್ದನು. ತನ್ನ ಆನ್ ಲೈನ್ ಗೇಮ್ ಆಡಲು ಸಬ್‌ಸ್ಕ್ರಿಪ್ಸನ್, ಆಟದ ಎಂಟ್ರಿ ಪಾವತಿ ಹಾಗೂ ಆಟದ ಮೇಲೆ ಕಟ್ಟುವ ಬಾಜಿ ಹಣಕ್ಕಾಗಿ ಸ್ನೇಹಿತರು ಹಾಗೂ ಆನ್‌ಲೈನ್‌ಗಳ ಆಪ್‌ಗಳನ್ನು ಸಾಲ ಮಾಡಿಕೊಂಡಿದ್ದಾನೆ. ನಂತರ, ಸಾಲ ತೀರಿಸುವಂತೆ ಪ್ರವೀಣನಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು.

Bengaluru young Man Praveen died from online gaming debt sat

ಮನೆಯವರಿಗೆ ಗೊತ್ತಿಲ್ಲದಂತೆ ಸಾಲ ಮಾಡಿಕೊಂಡಿದ್ದ ಪ್ರವೀಣ ತಾನು ಕಳೆದುಕೊಂಡ ಹಣವನ್ನು ಪುನಃ ಆನ್‌ಲೈನ್ ಗೇಮಿಂಗ್‌ನಿAದಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಪುನಃ ಸಾಲ ಮಾಡಿ ಹಣ ಹೂಡಿಕೆ ಮಾಡಿ ಆನ್‌ಲೈನ್ ಗೇಮ್ ಆಡಿದ್ದಾನೆ. ಇದರಿಂದ ಸಾಲ ಪ್ರಮಾಣ ತೀರ ಹೆಚ್ಚಳವಾಗಿತ್ತು. ಇದಾದ ನಂತರ ಸಾಲ ನೀಡಿದವರು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದರAತೆ. ಜೊತೆಗೆ, ಸಾಲಕ್ಕೆ ಹಣವನ್ನು ತಂದು ಆನ್‌ಲೈನ್ ಗೇಮಿನಲ್ಲಿ ಆಡುವಂತೆ ಮಾಡುತ್ತಿದ್ದರು. ಆತ ಗೆಲ್ಲುತ್ತಿದ್ದ ದುಡ್ಡನ್ನು ತಾವು ತೆಗೆದುಕೊಳ್ತಿದ್ದರಂತೆ. ಇದೇ ಕಾರಣಕ್ಕೆ ಬೇಸೆತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತ ಪ್ರವೀಣದ ಪಾಲಕರು ಆರೋಪ ಮಾಡಿದ್ದಾರೆ.

ಈ ಘಟನೆ ನಡೆದು 10 ದಿನಗಳ ಕಳೆದಿದ್ದು, ಅವರ ಪಾಲಕರು ಕೆ.ಆರ್. ಪುರಂ ಠಾಣೆಗೆ ಬಂದು ದೂರು ನೀಡಿದ್ದಾರೆ. ಅವರ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ತನಿಖೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಪ್ರವೀಣ ಆನ್‌ಲೈನ್ ಗೇಮಿಂಗ್‌ಗೆ ಬಲಿ ಆಗಿರುವುದು ಬೆಳಕಿಗೆ ಬಂದಿದೆ.

Related posts

Leave a Comment