ಉಡುಪಿ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳ ‘ಥ್ರಸ್ಟ್ ಎಂಐಟಿ’ ತಂಡ ವನ್ನು ಮೈ ಗೌ ಇಂಡಿಯಾ ನಡೆಸಿದ ಸ್ಪೇಸ್‌ಪೋರ್ಟ್ ಅಮೆರಿಕಾ ಕಪ್-2024ರಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕಾಗಿ ‘ಭಾರತದ ಯಂಗ್ ಇನೋವೇಟರ್ಸ್’ ಗಳಾಗಿ ಮಾನ್ಯತೆ ನೀಡಲಾಗಿದೆ.
‘ದಿ ಸ್ಪೇಸ್‌ಪೋರ್ಟ್ ಅಮೆರಿಕ ಕಪ್’ ಎಂಬುದು ರಾಕೆಟ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ ಅತ್ಯಂತ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಸ್ಪರ್ಧಿಸುತ್ತಾರೆ.
ರಾಕೆಟ್‌ಗಳ ವಿನ್ಯಾಸ, ನಿರ್ಮಾಣ ಹಾಗೂ ಅವುಗಳ ಉಡಾವಣೆ ಸವಾಲುಗಳಿಗೆ ವಿದ್ಯಾರ್ಥಿಗಳು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಏರೋಸ್ಪೇಸ್ ಕ್ಷೇತ್ರದಲ್ಲಿ ಪ್ರತಿಭಾನ್ವೇಷಣೆಗೆ ನಡೆಯುವ ಬೃಹತ್ ಸ್ಪರ್ಧೆ ಇದಾಗಿದೆ.
ಈ ಬಾರಿ ಎಂಐಟಿಯ ಥ್ರಸ್ಟ್ ಎಂಐಟಿ ತಂಡ ತೋರಿದ ಅತ್ಯುತ್ತಮ ಪ್ರದರ್ಶನ ಮೈ ಗೌ ಇಂಡಿಯಾದಿಂದ ರಾಷ್ಟ್ರೀಯ ಮನ್ನಣೆ ಪಡೆಯಲು ಯಶಸ್ವಿಯಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
‘ಎಂಐಟಿ ವಿದ್ಯಾರ್ಥಿಗಳು ಹೊಸ ಬಾಹ್ಯಾಕಾಶ ಪರಿಶೋಧನಾ ತಂತ್ರಜ್ಞಾನ ವನ್ನು ಅಭಿವೃದ್ಧಿ ಪಡಿಸುವಲ್ಲಿ ತೋರಿದ ಕಠಿಣ ಪರಿಶ್ರಮ, ಆವಿಷ್ಕಾರ ಹಾಗೂ ಸಮರ್ಪಣಾ ಮನೋಭಾವದ ದ್ಯೋತಕವಾಗಿದೆ. ತಂಡದ ಈ ಸಾಧನೆ ಯಿಂದ ತಮಗೆ ಹೆಮ್ಮೆ ಎನಿಸಿದೆ.’ ಎಂದು ಮಾಹೆಯ ಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್ ನುಡಿದರು.