Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸುರತ್ಕಲ್: ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

Advertisement

ಸುರತ್ಕಲ್ : ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯ ಸುರತ್ಕಲ್ ನಗರದಿಂದ ದಿನಾಂಕ 26-2-2025 ರಾತ್ರಿ 10:00 ಗಂಟೆಯಿಂದ 27-2-2025 ಬೆಳಿಗ್ಗೆ 6:00 ಗಂಟೆ ತನಕ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಸುರತ್ಕಲ್ ನಲ್ಲಿ ಸಾಮೂಹಿಕ ಯೋಗ ಶಿವ ಮತ್ತು ಜಾಗರಣೆ ನಮಸ್ಕಾರ ಕಾರ್ಯಕ್ರಮ ನಡೆಯಿತು.

ರಾತ್ರಿ 10:00 ಯಿಂದ ಭಜನೆ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಡಾಕ್ಟರ್ S.ಗಣಪ ಮಯ್ಯ ದೀಪ ಪ್ರಜ್ವಲನೆಯನ್ನು ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀಯುತ ರಾಘವೇಂದ್ರ , ಜಿಲ್ಲಾ ಪ್ರಮುಖರಾದ ಶ್ರೀಯುತ ಈಶ್ವರ ಅಣ್ಣ ನಗರದ ಸಂಚಾಲಕರಾದ ಶ್ರೀಮತಿ ಶ್ಯಾಮಲ, ಅಕ್ಕ ಮತ್ತು ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ರಾತ್ರಿ 11:00 ಗಂಟೆಯಿಂದ ಶಿವ ಜಾಗರಣೆಯ ಮಹತ್ವ, ಮೃತ್ಯುಂಜಯ ಜಪ ಮಹತ್ವ, 108 ಮೃತ್ಯುಂಜಯ ಜಪ ಧ್ಯಾನ, 1008 ಬಾರಿ ಶಿವ ಪಂಚಾಕ್ಷರಿ ಜಪ ಪಠಣೆ ಹಾಗೂ ಮಹತ್ವ, ಶಿವ ಅಷ್ಟೋತ್ತರ ಶತನಾಮನಿ ಪಠಣೆ ಹಾಗೂ ಬಿಲ್ವಪತ್ರ ಅರ್ಚನೆ ಮತ್ತು ಶಿವರಾತ್ರಿಯ ಪುರಾಣ ಕಥೆಗಳು ಈ ಎಲ್ಲಾ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು.

ನಂತರ ಬೆಳಿಗ್ಗೆ 4:00 ರಿಂದ 6:00 ಗಂಟೆ ತನಕ ನಗರದ ಶಿಕ್ಷಣ ಪ್ರಮುಖರು ನೀಡಿದ ಮಾರ್ಗದರ್ಶನದಂತೆ ನಾಲ್ಕು ಆವೃತ್ತಿ ಯಲ್ಲಿ 11 ಸುತ್ತು ಶಿವ ನಮಸ್ಕಾರ ವನ್ನು ಎಲ್ಲಾ ಯೋಗ ಬಂಧುಗಳು ಭಕ್ತಿ ಭಾವದಿಂದ ಸೇರಿ ಮಾಡಲಾಯಿತು.

ಪ್ರಾಂತ ಪ್ರಮುಖರು ಜಿಲ್ಲಾ ಪ್ರಮುಖರು ನಗರ ಪ್ರಮುಖರು ಶಿಕ್ಷಕರು ಹಾಗೂ ಸುಮಾರು 155 ಯೋಗ ಬಂಧುಗಳು ಭಾಗವಹಿಸಿದರು. ಕಾರ್ಯಕ್ರಮದ ಸಹಸಂಚಾಲಕರಾದ ಶ್ರೀಯುತ ಜಿತೇಂದ್ರ ವಂದಿಸಿದರು.  ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

Leave a Comment