
ಇಂದು ರಾಕಿಂಗ್ ಸ್ಟಾರ್ ಯಶ್ ಜನುಮದಿನ. ಹುಟ್ಟುಹಬ್ಬವನ್ನು ಸಣ್ಣದಾಗಿ ಸೆಲೆಬ್ರೆಷನ್ ಮಾಡಿದ್ದಾರೆ. ಇದರ ಜೊತೆಗೆ ಟಾಕ್ಸಿಕ್ ಮೂವಿಯ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು ಯಶ್ ಹೊಸ ಲುಕ್ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಯಶ್ ಅವರ ಬರ್ತ್ ಡೇ ಹಿನ್ನೆಲೆಯಲ್ಲಿ ಮುಂದಿನ ಸಿನೆಮಾ ಟಾಕ್ಸಿಕ್ ಮೂವಿಯ ಫಸ್ಟ್ ಲುಕ್ ವಿಡಿಯೋ ರಿವೀಲ್ ಮಾಡಿದ್ದಾರೆ. ಇದರಲ್ಲಿ ಯಶ್ ಸಖತ್ ಸ್ಟೈಲೀಶ್ ಆಗಿ ಕಾಣಿಸಕೊಂಡಿದ್ದು ಹಾಲಿವುಡ್ ಸ್ಟಾರ್ ರೀತಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಡ್ರಗ್ ಮಾಫಿಯಾ ಕುರಿತ ಕಥೆ ಇರಬಹುದು ಎಂದು ಊಹಿಸಿ ಹೇಳಬಹುದು. ಪಬ್ ನಲ್ಲಿರುವ ದೃಶ್ಯಗಳು ಫಸ್ಟ್ ಲುಕ್ ನಲ್ಲಿ ಕಾಣಬಹುದಾಗಿದೆ.
ಇನ್ನು ರಿಲೀಸ್ ಮಾಡಿರುವ ವಿಡಿಯೋದಲ್ಲಿ ಎಲ್ಲ ವಿದೇಶಿ ಮಹಿಳೆಯರೇ ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಾ ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಇಲ್ಲಿಗೆ ಕಾರಲ್ಲಿ ಬರುವ ಯಶ್ ಧಮ್ ಎಳೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ಯಶ್ ಎಂಟ್ರಿಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಸಿನಿಮಾ ಬೇರೆ ಲೆವೆಲ್ ಇರಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಯಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೊದಲಿನಂದ ಹುಟ್ಟುಹಬ್ಬವನ್ನು ದೊಡ್ಡದಾಗಿ ಸಂಭ್ರಮದಿoದ ಆಚರಣೆ ಮಾಡಿಕೊಳ್ಳದೇ ಚಿಕ್ಕದಾಗಿ ಆಚರಿಸಿಕೊಂಡಿದ್ದಾರೆ. ಅದು ಬೇರೆ ಬೀಚ್ ವೊಂದರಲ್ಲಿ ಮಧ್ಯರಾತ್ರಿ ಚಿತ್ರತಂಡದ ಸದಸ್ಯರ ಜೊತೆಗೂಡಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕೆವಿಎನ್ ನಿರ್ಮಾಪಕರು, ಸಿನಿಮಾ ತಂಡದ ಇತರೆ ಸದಸ್ಯರು ಇದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬ ಕೂಡ ಭಾಗಿಯಾಗಿತ್ತು. ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳು ಕೂಡ ವೈರಲ್ ಆದ ಫೋಟೋದಲ್ಲಿದ್ದಾರೆ. ಸದ್ಯ ಟಾಕ್ಸಿಕ್ ಲುಕ್ ಭಾರೀ ಸದ್ದು ಮಾಡುತ್ತಿದೆ.