ದೆಹಲಿಯ ಶ್ರದ್ಧಾ ವಾಕರ್ ಕೊಲೆಯಂತೆ ಮತ್ತೊಂದು ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಸ್ನೇಹ ಬೆಳೆಸಿಕೊಂಡ ಮುಸ್ಲಿಂ ವ್ಯಕ್ತಿ ಆಕೆಯನ್ನು ಕೊಲೆ ಮಾಡಿ ದೇಹವನ್ನು ಆರು ತುಂಡುಗಳನ್ನಾಗಿ ಮಾಡಿ ಹೂತ ಘಟನೆ ನಡೆದಿದೆ.
4 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅನಿತಾ ಚೌಧರಿ (50) ಎಂದು ಗುರುತಿಸಲಾಗಿದೆ. ಅ.27 ಭಾನುವಾರದಂದು ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಎರಡು ದಿನಗಳ ಬಳಿಕ ಅ.30 ಬುಧವಾರದಂದು 6 ತುಂಡುಗಳಾಗಿ ಪತ್ತೆಯಾಗಿದೆ.
ಅನಿತಾ ಜೋಧ್‌ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಪಾರ್ಲರ್ ಮುಚ್ಚಿ, ಮನೆಗೆ ತೆರಳಿದ್ದರು. ಆದರೆ ಆಕೆ ಮನೆಗೆ ತಲುಪಿರಲಿಲ್ಲ. ಮಾರನೇ ದಿನ ಆಕೆಯ ಪತಿ ಮನಮೋಹನ್ ಚೌಧರಿ (56) ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಆಕೆಯ ಕುಟುಂಬದ ಹಳೆಯ ಸ್ನೇಹಿತನೊಬ್ಬ ಕೊಂದಿರುವ ಶಂಕೆ ವ್ಯಕ್ತವಾಗಿತ್ತು.
ತನಿಖೆ ನಡೆಸಿದಾಗ, ಸಂತ್ರಸ್ತೆಯ ಮೊಬೈಲ್ ಲೊಕೆಷನ್ ಮತ್ತು ಕಾಲ್ ರೆಕಾರ್ಡ್ಸ್ ಪರಿಶೀಲನೆ ನಡೆಸಿದಾಗ ಗುಲ್ ಮೊಹಮ್ಮದ್ ಎಂಬ ವ್ಯಕ್ತಿಯ ಮನೆಯ ಲೊಕೇಷನ್ ಸಿಕ್ಕಿದೆ. ಮೊಹಮ್ಮದ್ ಸಂತ್ರಸ್ತೆಯ ಸ್ನೇಹಿತನಾಗಿದ್ದ. ಆಕೆ ಆತನನ್ನು ಸಹೋದರ ಎಂದು ಪರಿಗಣಿಸಿದ್ದಳು ಎಂದು ತಿಳಿದುಬಂದಿದೆ.
ಸರ್ದಾರ್‌ಪುರ ಬಿ ರಸ್ತೆಯಲ್ಲಿರುವ ಅಗರ್ವಾಲ್ ಟವರ್‌ನಲ್ಲಿ ಅನಿತಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಗುಲ್ ಕೂಡ ಅದೇ ಟವರ್‌ನಲ್ಲಿ ಅಂಗಡಿಯನ್ನು ಹೊಂದಿದ್ದಾನೆ, ಅಲ್ಲಿ ಅವರಿಗೆ ಪರಿಚಯವಾಯಿತು.ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ಅವರು ರಾತ್ರಿ ಮನೆಗೆ ಹಿಂತಿರುಗದ ಕಾರಣ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು ಮತ್ತು ಅವರ ಪತಿ ಅಕ್ಟೋಬರ್ 29 ರಂದು ಸರ್ದಾರ್‌ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಬಳಿಕ ಮೊಹಮ್ಮದ್ ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ, ಮೃತದೇಹವನ್ನು ಮನೆಯ ಹಿಂದೆ ಹೂಳಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಸ್ಥಳದ ಪರಿಶೀಲನೆ ನಡೆಸಿದಾಗ ಆಕೆಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿರುವುದು ಪತ್ತೆಯಾಗಿದೆ. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸದ್ಯ ಮೊಹಮ್ಮದ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತನ ಪತ್ನಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
The severed body of a woman, who ran a beauty parlour in Jodhpur and went missing four days ago in the city, was recovered by police on Wednesday. According to police, the call list of the deceased woman revealed the name of Gul Mohammed, her family friend, who remained untraceable since she went missing.
ACP Ravindra Bothra said the Gul cut her body into six pieces and buried severed parts. Bothra said Anita Chaudhary’s husband Manmohan lodged a missing case at the Sardarpura Police Station on Tuesday.
During the investigation, the police checked the call list of the deceased’s mobile and came to know that she had a conversation with Gul Mohammad. After that, police reached Gangana in the Boranada police station area, where Gul Mohammad’s wife was traced. The woman tried to evade police queries at first but later said she was at her sister’s house for three days.