Mangalore and Udupi news
ಅಪರಾಧದೇಶ- ವಿದೇಶಪ್ರಸ್ತುತರಾಜ್ಯ

ಶಾಲೆಯ ಯಶಸ್ಸಿಗಾಗಿ ಬಾಲಕನನ್ನು ಬಲಿ ಕೊಟ್ಟ ಶಾಲಾ ಆಡಳಿತ ಮಂಡಳಿ.!!

ಮಾಟಮ0ತ್ರದ ಭಾಗವಾಗಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ 7 ವರ್ಷದ ಬಾಲಕನ್ನು ಕೊಲೆ ಮಾಡಿದ ಘಟನೆ ಸೆ.26 ಗುರುವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಶಾಲೆಯೊಂದರಲ್ಲಿ ನಡೆದಿದೆ.

ವಾಮಾಚಾರ ಪ್ರಕರಣಕ್ಕೆ ಸಂಬ0ಧಪಟ್ಟ0ತೆ ರಾಸ್‌ಗವಾನ್‌ನ ಡಿಎಲ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ, ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಕೆಲ ತಿಂಗಳ ಹಿಂದೆಯೂ ಕೂಡ ಒಂದು ಮಗುವನ್ನು ಬಲಿಕೊಡುವ ವಿಫಲ ಪ್ರಯತ್ನವೂ ನಡೆದಿತ್ತು ಎಂದು ತಿಳಿಸಿದ್ದಾರೆ. ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಉದ್ದೇಶಿಸಲಾದ ಮಾಟಮಂತ್ರದ ಆಚರಣೆಯಲ್ಲಿ ಮಗುವನ್ನು ಬಲಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತರನ್ನು ಶಾಲಾ ನಿರ್ದೇಶಕ ದಿನೇಶ್ ಬಘೇಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಸಿಂಗ್ ಮತ್ತು ರಾಮಪ್ರಕಾಶ್ ಸೋಲಂಕಿ ಎಂದು ಗುರುತಿಸಿದ್ದಾರೆ. ವರದಿಯ ಪ್ರಕಾರ, ಮಾಟಮಂತ್ರವನ್ನು ನಂಬಿದ್ದ ಜಶೋಧನ್ ಸಿಂಗ್ ತನ್ನ ಮಗ ಮತ್ತು ಶಿಕ್ಷಕರಿಗೆ ಶಾಲೆಯ ಮಗುವೊಂದನ್ನು ಬಲಿ ಕೊಡುವುದರಿಂದ ಶಾಲೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂದು ತಿಳಿಸಿದ್ದರು. ಅದರಂತೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 600 ವಿದ್ಯಾರ್ಥಿಗಳನ್ನು ಈ ಶಾಲೆಯ ಹೊಂದಿದ್ದು, ಪುಟ್ಟ ಮಕ್ಕಳನ್ನೂ ಕೂಡ ತನ್ನ ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳುತ್ತದೆ. ಬಲಿಯಾಗಿರುವ ಬಾಲಕ ಕೂಡ ಇದೇ ಹಾಸ್ಟೆಲ್‌ನಲ್ಲಿದ್ದ ಎನ್ನಲಾಗಿದೆ. ಇನ್ನು ಬಾಲಕನ ತಂದೆ ದೆಹಲಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ ಎನ್ನಲಾಗಿದೆ.

2ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ಸೋಮವಾರ ತನ್ನ ಹಾಸ್ಟೆಲ್ ಬೆಡ್‌ನಲ್ಲಿ ಪ್ರಜ್ಞೆ ಇಲ್ಲದೆ ಬಿದ್ದುಕೊಂಡಿದ್ದ ಎನ್ನಲಾಗಿದೆ. ಘಟನೆಯನ್ನು ವರದಿ ಮಾಡುವ ಬದಲು, ಶಾಲೆಯ ಸಿಬ್ಬಂದಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು, ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಬಾಲಕನ ಶವವನ್ನು ಅವನ ಕಾರಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ.

Related posts

Leave a Comment