Mangalore and Udupi news
ಕಾಸರಗೋಡು

ಹಿಂದೂ ಸಂಘಟನೆಯ ಯುವ ಮುಖಂಡ ಅಸೌಖ್ಯದಿಂದ ಮೃತ್ಯು

ವರ್ಕಾಡಿ: ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಯುವ ಮುಖಂಡನೋರ್ವ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮಂಜೇಶ್ವರದ ವರ್ಕಾಡಿಯ ಪಾವಳ ಗುತ್ತು ನಿವಾಸಿ ಹಿರಿಯ ಪ್ರಗತಿಪರ ಕೃಷಿಕ ರಘುನಾಥ ಶೆಟ್ಟಿ – ವಿಜಯಲಕ್ಷ್ಮಿ ದಂಪತಿಯ ಪುತ್ರ ಸಂಘಪರಿವಾರದ ಮುಖಂಡ ರತೀಶ್ ಶೆಟ್ಟಿ ಪಾವಳ (36) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಕಳೆದೆರಡು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಟೋಬರ್ 21ರ ರಾತ್ರಿ ನಿಧಾನರಾದರು. .

ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಭಾರತೀಯ ಜನತಾ ಪಕ್ಷ, ಹಾಗೂ ದೇವಸ್ಥಾನ, ಮಂದಿರ, ದೈವಸ್ಥಾನದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಾಗಿದ್ದಾರೆ.

ಹಿಂದೂ ಸಮಾಜದಲ್ಲಿ ಯಾವುದೇ ರೀತಿಯ ಜಟಿಲ ಸಮಸ್ಯೆಗಳುಂಟಾದಲ್ಲಿ ಮೊದಲಾಗಿ ತಲುಪಿ, ಸಮಸ್ಯೆ ಬಗೆಹರಿಸುವಲ್ಲಿ ಶ್ರಮವಹಿಸುತ್ತಿದ್ದ, ವರ್ಕಾಡಿ ಕರ್ನಾಟಕದ ಗಡಿ ಭಾಗವಾದ ನರಿಂಗಾನ ಪರಿಸರದಲ್ಲಿ ಹೆಸರುವಾಸಿಯಾಗಿದ್ದರು. ಮೃತರು ತಂದೆ – ತಾಯಿ, ಹಾಗೂ ಏಕ ಸಹೋದರಿ ರಮ್ಯಾ ಭಂಡಾರಿ, ಅಳಿಯ ಸುಕೇಶ್ ಭಂಡಾರಿ ಪನೀರ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಈ ಹಿಂದೆ ಬಿಲ್ಡಿಂಗ್ ಕಾಂಟ್ರಾಕ್ಟರ್ ರಾಗಿದ್ದು, ಬಳಿಕ ತಂದೆಯ ಜೊತೆ ಕೃಷಿ ಕಾರ್ಯದಲ್ಲಿ ತೊಡಗಿದ್ದರು.

A young leader who was involved in various organizations including Sangh Parivar, Vishwa Hindu Parishad, passed away due to a brief illness. Sangh Parivar leader Ratish Shetty Pawla (36), son of Raghunath Shetty – Vijayalakshmi, a resident of Pawala Guttu in Varkady, Manjeshwar, was suffering from short-term illness and was undergoing treatment at a private hospital in Deralakatta for the last couple of days. He passed away on the night of October 21. 

Related posts

Leave a Comment