Mangalore and Udupi news
ಉಡುಪಿಪ್ರಸ್ತುತ

ಉಡುಪಿ: ಶಾಲಾ ಆವರಣದಲ್ಲಿ ಜೇನುನೋಣ ದಾಳಿ – 40 ವಿದ್ಯಾರ್ಥಿಗಳಿಗೆ ಗಾಯ

Advertisement

ಉಡುಪಿ: ವೊಳಕಾಡು ಶಾಲೆಯ ಆವರಣದಲ್ಲಿ ಜೇನುನೊಣಗಳ ದಾಳಿಯಿಂದ 40 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜ.28ರಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ. ಈ ಪೈಕಿ ಮೂವರು ಮಕ್ಕಳು ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದು, ಒಬ್ಬ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದ 37 ವಿದ್ಯಾರ್ಥಿಗಳು ಹೊರರೋಗಿಗಳ ಆರೈಕೆಯನ್ನು ಪಡೆದರು ಮನೆಗೆ ತೆರೆಳಿದರೆ.ಎಲ್ಲಾ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ ಮತ್ತು ಆತಂಕಕ್ಕೆ ಯಾವುದೇ ಕಾರಣವಿಲ್ಲ.

 

 

Related posts

Leave a Comment