Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಂಟ್ವಾಳ: ಮನೆಯಿಂದ ಹೊರಟ ಆಟೋ ಚಾಲಕ ನಾಪತ್ತೆ.!!

ವಿಟ್ಲ: ಆಟೋ ಚಾಲಕ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರಕಂಬ ಗ್ರಾಮದ ಬಾಯಿಲ ನಿವಾಸಿ ಧನರಾಜ್‌( 28) ನಾಪತ್ತೆಯಾದ ಆಟೋ ಚಾಲಕ.

ನ.28 ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಗಂಟೆಗೆ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಡಿ.3 ರವರೆಗೂ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ.

ಧನರಾಜ್‌ನ ರಿಕ್ಷಾ ಮಾತ್ರ ಉಪ್ಪಿನಂಗಡಿಯಲ್ಲಿದ್ದು ಆತನ ಮೊಬೈಲ್‌ ನಂಬ್ರ ಸ್ವೀಚ್‌ ಆಫ್‌ ಆಗಿರುತ್ತದೆ. ಮನೆಗೂ ಬಾರದೆ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾದ ಧನರಾಜ್‌ನನ್ನು ಪತ್ತೆಮಾಡಿ ಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Related posts

Leave a Comment