ಸುರತ್ಕಲ್ : ವಿಶ್ವ ಹಿಂದೂ ಪರಿಷತ್, ಬಜರಂಗದಳ ಪಿಲಿಜಾರ ಶಾಖೆ ತೋಕೂರು ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಾರ್ವಜನಿಕ ಗೋ ಪೂಜೆಯು ಅ.31 ರಂದು ರಾಮನಗರ ಸರ್ಕಲ್ ಬಳಿ ಅದ್ದೂರಿಯಾಗಿ ನಡೆಯಿತು.
ಗೋ ಪೂಜೆ, ಕುಣಿತ ಭಜನೆ, ಗೌರವಾರ್ಪಣೆ, ಸಿಡಿಮದ್ದು ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿತು.
ಈ ಸಂದರ್ಭದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಪೆರ್ಮುದೆ ಹಿಂದೂ ಅನುದಾನಿತ ಶಾಲೆಯ ಸಂಚಾಲಕ ರಮೇಶ್ ರಾವ್, ಅರುಣ್ ಚೌಟ, ಜಾರಪ್ಪ ಪೂಜಾರಿ, ಸೀತಾರಾಮ ಶೆಟ್ಟಿ, ಗಣಪ ಪೂಜಾರಿ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಮತಾ ಲಕ್ಷ್ಮಣ್ ಬಂಗೇರ, ರಾಧಕೃಷ್ಣ ಭಜನಾ ಮಂದಿರದ ಅಧ್ಯಕ್ಷ ದಿನೇಶ್ ಅಮೀನ್ ಮೈಂದಗುರಿ, ಸಮಾಜ ಸೇವಾ ಸಂಘದ ದಿನೇಶ್ ರಾಮ್ಪಾಲ್, ಬಜರಂಗಳದಳ ಸುರತ್ಕಲ್ ಪ್ರಖಂಡದ ಸಹ ಸಂಚಾಲಕ ಸುನಿಲ್ ತೋಕೂರು, ಶ್ರೀಧರ್ ಕೋಟ್ಯಾನ್, ತೋಕೂರು ಫ್ರೆಂಡ್ಸ್ ಇದರ ಸುಖೇಶ್ ಸನಿಲ್, ಸುದೇಶ್ ಶೆಟ್ಟಿ ಸೇರಿದಂತೆ ಗಣ್ಯಾತಿಗಣ್ಯರು, ಕಾರ್ಯಕರ್ತರು, ಊರಿನ ಸಮಸ್ತರು ಭಾಗಿಯಾಗಿದ್ದರು.