Mangalore and Udupi news
ಅಪರಾಧದಕ್ಷಿಣ ಕನ್ನಡಪ್ರಸ್ತುತರಾಜ್ಯ

ವೇಶ್ಯಾವಾಟಿಕೆ ಅಡ್ಡೆ: 12 ಅಪ್ರಾಪ್ತೆಯರ ರಕ್ಷಣೆ.!!

ಬೆಂಗಳೂರು ನಗರ ವ್ಯಾಪ್ತಿಯ ವಿವಿಧೆಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 12 ಮಂದಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ.

ಐದು ತಿಂಗಳ ಆವಧಿಯಲ್ಲಿ ನಗರ ವ್ಯಾಪ್ತಿ 11 ಕಡೆಯಲ್ಲಿ ಈ ಜಂಟಿ ದಾಳಿ ನಡೆದಿದ್ದು, ಈ ವೇಳೆ 14 ರಿಂದ 17 ವರ್ಷ ವಯಸ್ಸಿನ 12 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಸಂತ್ರಸ್ತ ಬಾಲಕಿಯರಲ್ಲಿ ವಿದೇಶದ ಮಕ್ಕಳು ಸೇರಿದ್ದಾರೆ.

ಅಲ್ಲದೆ 26 ಮಂದಿ ಪಿಂಪ್‌ಗಳು ಹಾಗೂ ಐವರು ಗ್ರಾಹಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ಸಮಾಜ ಕಲ್ಯಾಣ ಇಲಾಖೆಯ ಪುನರ್ವಸತಿ ಕೇಂದ್ರದ ಸುಪರ್ದಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Comment