ಸುರತ್ಕಲ್ : ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯ ಸುರತ್ಕಲ್ ನಗರದಿಂದ ದಿನಾಂಕ 10 ಜನವರಿ ಶುಕ್ರವಾರ ದಂದು ವಿಷ್ಣುಮೂರ್ತಿ ದೇವಸ್ಥಾನ ಕುಳಾಯಿಯಲ್ಲಿ ಸಾಮೂಹಿಕ ವಿಷ್ಟು ನಮಸ್ಕಾರ ಮತ್ತು
ಶ್ರೀ ಭದ್ರಲಕ್ಷ್ಮಿ ಸೋತ್ರಪಠಣ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 4:30ಕ್ಕೆ ಭಜನೆ ,ಅಮೃತವಚನ ಪಂಚಾಂಗ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ದೇವಸ್ಥಾನದ ಮೊಕ್ತೇಸರಾದ ಶ್ರೀಯುತ ಕೃಷ್ಣ ಹೆಬ್ಬಾರ್ ದೀಪ ಪ್ರಜ್ವಲನೆಯನ್ನು ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಜನಾರ್ದನ ಸಾಲಿಯಾನ್ ನಗರದ ಸಂಚಾಲಕರಾದ ಶ್ರೀಮತಿ ಶ್ಯಾಮಲ, ಶ್ರೀಮತಿ ಕವಿತಾ, ಶ್ರೀಯುತ ಅಶೋಕ, ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ವೈಕುಂಠ ಏಕಾದಶಿಯ ಮಹತ್ವವನ್ನು ಶ್ರೀಯುತ ಗುರುಪ್ರಸಾದ್ ಕೋಡಿಕೆರೆ ತಿಳಿಸಿದರು. ಯೋಗ ಅಭ್ಯಾಸವನ್ನು ಸುರತ್ಕಲ್ ನಗರದ ಪ್ರಮುಖರದ ದೇವದಾಸ್ ಮೀನಕಳಿಯ ಮತ್ತು ಜಯರಾಮ ಹಾಗೂ ಶಿಕ್ಷಕರಾದ ತಾರಾನಾಥ್ ಕುಲಾಲ್ ಭವನ ಮತ್ತು ಶ್ರೀಮತಿ ಗಾಯತ್ರಿ ನಡೆಸಿಕೊಟ್ಟರು. ಸುರತ್ಕಲ್ ನಗರದ ಯೋಗಬಂಧು ಕಣ್ಣಪ್ಪ , ಲೋಳಾಕ್ಷಿ, ವಾಸುದೇವ , ಸಿಂಧು ವಿಜಯ, ಜಯಂತಿ, ಚಂದ್ರಹಾಸ ಬಾಳ, ಸುಮಿತ್ರ, ಪ್ರಾತ್ಯಕ್ಷತೆಯಲ್ಲಿ ಜೋಡಿಸಿಕೊಂಡರು.
ಸುಮಾರು 250 ಯೋಗಬಂಧುಗಳು ಸೇರಿ 10 ಸುತ್ತು ವಿಷ್ಣು ನಮಸ್ಕಾರ ಹಾಗೂ ಶ್ರೀ ಭದ್ರಲಕ್ಷ್ಮಿ ಸೋತ್ರ ಪಠಣ ಮಾಡಿದರು. ಕಾರ್ಯಕ್ರಮದ ಸಂಯೋಜಕ ಜನಾರ್ಧನ ಸಾಲಿಯಾನ್ ವಂದಿಸಿದರು. ಶ್ರೀಮತಿ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.
