ಸಿನಿಮಾ ಅಂದ್ರೆ ಸುಮ್ನೇನಾ? 3 ಗಂಟೆ ಪ್ರೇಕ್ಷಕರನ್ನು ಕುಳ್ಳಿರಿಸುವಂತೆ ಮಾಡಿ ವಿಚಿತ್ರ ಅನುಭವ ನೀಡುವ ಶಕ್ತಿ ಸಿನಿಮಾಗೆ ಮಾತ್ರ ಇದೆ. ಆದರೆ ಹಾಲಿವುಡ್ ನಲ್ಲಿ ಸಿನಿಮಾ ಅಂದ್ರೆ ಊಹಿಸಲು ಸಾಧ್ಯವೇ ಇಲ್ಲ. ಡಿಫರೆಂಟ್ ಹಾಗೂ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಣ ಮಾಡುತ್ತಾರೆ. ವಿಭಿನ್ನವಾದ ಅನುಭವನ್ನು ನೀಡ್ತಾರೆ. ಆದರೆ ಇಲ್ಲೊಂದು ಸಂಗತಿ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಅದೇನೆಂದರೆ ಬಿಗ್ ಬಜೆಟ್ ಸಿನಿಮಾವೊಂದು ಆಪಲ್ ಐಫೋನ್ ನಲ್ಲಿ ಚಿತ್ರೀಕರಣಗೊಂಡಿದೆ. ಇದು ನಂಬಲು ಅಸಾಧ್ಯವಾದ ಘಟನೆಯಾಗಿದೆ.
ಹೌದು. ಹಾಲಿವುಡ್‌ನಲ್ಲಿ ಬರೋಬ್ಬರಿ 555 ಕೋಟಿ ಬಜೆಟ್‌ನಲ್ಲಿ ಮೂಡಿಬಂದ ಜೊಂಬಿ ಪ್ಲಿಕ್ ’28 ಇಯರ‍್ಸ್ ಲೇಟರ್ ಎಂಬ ಸಿನೆಮಾವನ್ನು ಐಫೋನ್ 15 ಪ್ರೊ ಮ್ಯಾಕ್ಸ್ ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದಕ್ಕೆ 28 ವರ್ಷಗಳ ಬಳಿಕ ಎಂದು ಹೆಸರನ್ನು ನೀಡಲಾಗಿದೆ. ಮುಂದಿನ ವರ್ಷ ಜೂನ್?ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
28 ವರ್ಷಗಳ ನಂತರ 75 ಮಿಲಿಯನ್ ಬಜೆಟ್‌ನಲ್ಲಿ ಐಫೋನ್ ಬಳಸಿ ಚಿತ್ರೀಕರಿಸಲಾಗಿದೆ. ದೊಡ್ಡ ಬಜೆಟ್‌ನ ಸಿನಿಮಾವನ್ನ ಐಫೋನ್ ನಲ್ಲಿ ಚಿತ್ರೀಕರಿಸುವ ಸಂಗತಿ ಕೇಳಿ ಎಲ್ಲರಿಗೂ ಅಚ್ಚರಿಯಾಗಿದೆ. ಸದ್ಯ ಈ ಸಿನಿಮಾ ಬರುವಿಕೆಗಾಗಿ ಅನೇಕರು ಕಾಯುತ್ತಿದ್ದಾರೆ. ಮಾಹಿತಿ ಪ್ರಕಾರ, ಐಫೋನ್‌ಗೆ 15 ಪ್ರೊ ಮ್ಯಾಕ್ಸ್ ವಿವಿಧ ಲೆನ್ಸ್ ಜೋಡಿಸಿ ಸಿನಿಮಾ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದೆ.
ಐಫೋನ್ ಬಳಸಿ ಚಿತ್ರೀಕರಣ ಮಾಡಿರೋದು ಇದೇ ಮೊದಲಲ್ಲ. ವಿಶಾಲ್ ಭಾರದ್ವಾಜ್ ಅವರ ಫರ್ಸತ್? ಮತ್ತು ಅರ್ಚನಾ ಅತುಲ್ ಫಡ್ಕೆ ಅವರ ಮಿರಾಜ್ ಸಿನಿಮಾವನ್ನು ಐಫೋನ್ ನಲ್ಲಿ ಚಿತ್ರೀಕರಿಸಲಾಗಿತ್ತು. ಹಾಲಿವುಡ್ ನಲ್ಲಿ ಕೆಲವು ಶಾಟ್‌ಗಳನ್ನು ಸೆರೆಹಿಡಿಯಲು ಐಫೋನ್ ಬಳಸುತ್ತಾರೆ. ದೊಡ್ಡ ಕ್ಯಾಮೆರಾ ಹೊಂದಾಣಿಕೆಯಾಗದ ಕಾರಣ ಐಫೋನ್ ಕ್ಯಾಮೆರಾ ಮೊರೆ ಹೋಗುತ್ತಾರೆ.