ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025ನ್ನು ಮಂಡಿಸಿದ್ದಾರೆ. ಸರಿಸರುಮಾರು 75 ನಿಮಿಷಗಳ ಚುಟುಕು ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್, ತೆರಿಗೆ ವಿನಾಯ್ತಿ ಘೋಷಣೆ ಮೂಲಕ ಮಧ್ಯಮ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಈ ಮಧ್ಯೆ ಈ ಬಾರಿಯ ಬಜೆಟ್ ಕುರಿತು ದೇಶದ ಆರ್ಥಿಕ ಕ್ಷೇತ್ರದ ತಜ್ಞರು ತಮ್ಮ ಅಭಿಪ್ರಾಯ ದಾಖಲಿಸಿದ್ದು, ಬಹುತೇಕರು ಈ ಬಜೆಟ್‌ನ್ನು ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಇದುವರೆಗೆ 7 ಬಜೆಟ್ ಮಂಡಿಸಿದ್ದು, ಇಂದು 8ನೇ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. ಜೊತೆಗೆ ಈ ಬಜೆಟ್‌ನಲ್ಲಿ ಕೆಲವು ವಸ್ತು/ಪದಾರ್ಥಗಳ ಬೆಲೆ ಏರಿಕೆಯಾಗಿದೆ.
ಬೆಲೆ ಅಗ್ಗವಾಗಿರುವ ವಸ್ತು/ಪದಾರ್ಥಗಳು:
ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ತೆರಿಗೆ
ಚರ್ಮದ ಉತ್ಪನ್ನಗಳು
36 ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆ ಔಷಧಗಳು
37 ಹೆಚ್ಚಿನ ಔಷಧಗಳಿಗೆ ವಿನಾಯಿತಿ
ವೈದ್ಯಕೀಯ ಉಪಕರಣಗಳು
ಎಲೆಕ್ಟ್ರಿಕ್ ಕಾರುಗಳು
ಎಲ್‌ಇಡಿ ಟಿವಿ-ಮೊಬೈಲ್
ಕ್ಯಾನ್ಸರ್ ಔಷಧಗಳ ಮೇಲಿನ ತೆರಿಗೆ
ಮೀನಿನ ಪ್ಲೇಟಿನ ಮೇಲಿನ ತೆರಿಗೆ
ಎತರ್ನೆಟ್ ಸ್ವಿಚ್ ಮೇಲಿನ ತೆರಿಗೆ
ಭಾರತದಲ್ಲಿ ತಯಾರಿಸಿದ ಬಟ್ಟೆಗಳು
ಹಡಗು ನಿರ್ಮಾಣದ ಕಚ್ಚಾ ಸಾಮಗ್ರಿಗಳು
ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ‍್ಯಾಪ್ ಮೇಲಿನ ತೆರಿಗೆ
ಮೀನಿನ ಪ್ಲೇಟಿನ ಮೇಲಿನ ತೆರಿಗೆ
ಇವಿ ಬ್ಯಾಟರಿಗಳ ಮೇಲಿನ ತೆರಿಗೆ
ಜೀವ ಉಳಿಸುವ ಔಷಧಗಳ ಮೇಲಿನ ತೆರಿಗೆ
ಖನಿಜಗಳ ಮೇಲಿನ ತೆರಿಗೆ
ಬೆಲೆ ದುಬಾರಿಯಾಗಿರುವ ವಸ್ತು/ಪದಾರ್ಥಗಳು:
ವಿಮಾನ ಇಂಧನ
ವಿಮಾನ ಟಿಕೆಟ್ ದರ
ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ
ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.25ರಷ್ಟು ಹೆಚ್ಚಳ
ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.10-ಶೇ.15ರಷ್ಟು ಹೆಚ್ಚಳ
ನೇಯ್ಗೆಯ ಬಟ್ಟೆಗಳು
ಐಶಾರಾಮಿ ಸರಕುಗಳು
ಆಲ್ಕೋಹಾಲ್
ತಂಬಾಕು
ಅನಗತ್ಯ ಆಮದು ವಸ್ತುಗಳು,
ಟೆಲಿಕಾಂ ಉಪಕರಣ
ಸಿಗರೇಟ್
ಚಿನ್ನ-ಬೆಳ್ಳಿ
ಆಮದು ಸುಂಕ ಏರಿಕೆ
